ಗೋಕಾಕ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಹಿಂದುವಿನ ಕನಸಾಗಿದ್ದು, ಇದೀಗ ಅದು ನನಸಾಗುತ್ತಿದೆ ಎಂದು ಜಗದ್ಗುರು ಶ್ರೀ ಪರಮಾನಂದ ಸ್ವಾಮಿಜಿ ಹೇಳಿದರು.
ಅವರು, ತಾಲೂಕಿನ ಮಮದಾಪೂರ ಗ್ರಾಮದ ಚರಂತಿಮಠದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಯೋಧ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಒಬ್ಬರಿಂದ ಆಯ್ತು ಎನ್ನುವುದಕ್ಕಿಂತ ದೇಶಾದ್ಯಾಂತ ಜನರಿಂದ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಾಗುತ್ತಿದ್ದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷದ ವಿಭಾಗ ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಮಾತನಾಡಿ, ಐದನೂರು ವರ್ಷಗಳ ಭಕ್ತರ ಬೇಡಿಕೆಯ, ಲಕ್ಷಾಂತರ ಜನರ ತ್ಯಾಗ ಹಾಗೂ ಬಲಿದಾನದ ಪ್ರತಿಫಲದಿಂದಾಗಿ ನಮ್ಮ ಕಾಲದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಎಲ್ಲರೂ ನಿಧಿ ಸಮರ್ಪಣೆ ಮಾಡುವ ಮೂಲಕ ಕೈ ಜೋಡಿಸಬೇಕಿದೆ ಎಂದು ಕರೆ ನೀಡಿದರು.
ಶ್ರೀರಾಮ ಮಂದಿರ ನಿಧಿ ಸಂಗ್ರಹ ಯೋಜನೆಯು ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿ ದರು. ನಮ್ಮ ರಾಮ, ನಮ್ಮ ರಾಮ, ನಮ್ಮ ಮನೆ ಎಂಬ ಭಾವನೆಯೊಂದಿಗೆ ನಿಧಿ ಸಂಗ್ರಹಕ್ಕೆ ಸ್ಪಂದಿಸುವAತೆ ಮನವಿ ಮಾಡಿದರು.
ವೇದಿಕೆಯ ಮೇಲೆ ಶ್ರೀ ಅತ್ಯಾನಂದ ಸ್ವಾಮಿಜಿ, ಶ್ರೀ ಶಿವಬಸವ ಸ್ವಾಮಿಜಿ, ಶ್ರೀ ನಾಗೇಶ್ವರ ಸ್ವಾಮಿಜಿ, ಶ್ರೀ ಪ್ರಭುದೇವ ಸ್ವಾಮಿಜಿ, ಶ್ರೀ ಚರಮೂರ್ತೇಶ್ವರ ಸ್ವಾಮಿಜಿ, ಶ್ರೀ ಲಿಂಗಾನAದ ಸ್ವಾಮಿಜಿ, ಶ್ರೀ ಆತ್ಮಾನಂದ ಸ್ವಾಮಿಜಿ, ಶ್ರೀ ಶಂಕರಾನAದ ಸ್ವಾಮಿಜಿ, ಶ್ರೀ ಮಹಾಂತಲಿAಗ ಸ್ವಾಮಿಜಿ, ಶ್ರೀ ದಯಾನಂದ ಸ್ವಾಮಿಜಿ, ಶ್ರೀ ತವಗದ ಬಾಳೇಶಜ್ಜನವರು, ಮಾತೋಶ್ರೀ ಜಾನಮ್ಮತಾಯಿ, ವಿಶ್ವ ಹಿಂದು ಪರಿಷದ ತಾಲೂಕಾಧ್ಯಕ್ಷ ಕೃಷ್ಣಾ ಕುರುಬಗಟ್ಟಿ, ಮುಖಂಡರಾದ ಸುರೇಶ ಸನದಿ, ಹನಮಂತ ದುರ್ಗನ್ನವರ ಇದ್ದರು.
ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಸ್ವಾಗತಿಸಿ, ವಂದಿಸಿದರು.
Check Also
ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!
Spread the loveತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!! ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ …