Breaking News

 ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯಗಳು ಕ್ಷೀಣಿಸುತ್ತಿವೆ – ಪ್ರೊ. ಉದಯಸಿಂಗ್ ರಜಪೂತ ಕಳವಳ!

Spread the love

 ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯಗಳು ಕ್ಷೀಣಿಸುತ್ತಿವೆ – ಪ್ರೊ. ಉದಯಸಿಂಗ್ ರಜಪೂತ ಕಳವಳ!

ಗೋಕಾಕ:  ಪ್ರಸ್ತುತ ವಿದ್ಯಮಾನಗಳ ಬೆಳವಣಿಗೆಯಿಂದ ಶಿಕ್ಷಕ ಹಾಗು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದಶಕದ ಹಿಂದೆ ಇದ್ದ ಗುರು-ಶಿಷ್ಯರ ಸಂಬAಧಗಳು ಇಂದು ಕಣ್ಮರೆಯಾಗುತ್ತಿವೆ. ಮೊಬೈಲ್ ಬಳಕೆಯಿಂದ ಗುರುಗಳ ಆದ್ಯತೆ ಕ್ಷೀಣಿಸುತ್ತಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಚಿಕ್ಕೋಡಿ ಬಿ. ಕೆ. ಕಾಲೇಜಿನ ಪ್ರಾಚಾರ್ಯ ಪ್ರೊ. ಉದಯಸಿಂಗ್ ರಜಪೂತ ಅವರು ಕಳವಳ ವ್ಯಕ್ತಪಡಿಸಿದರು.

ಅವರು ಗೋಕಾಕ ಶಿಕ್ಷಣ ಸಂಸ್ಥೆಯ ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯದ ೨೦೨೨-೨೩ನೇ ಸಾಲಿನ ಕ್ರೀಡಾ ಹಾಗೂ ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನರಾದ ಶ್ರೀ ಎ. ಎ. ಕಡಕೋಳ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆಶಾಲತಾ ಎಸ್. ತೇರದಾಳ, ಜಿಮಖಾನಾ ವಿಭಾಗದ ಉಪಾಧ್ಯಕ್ಷರಾದ ಪ್ರೊ. ಎ. ವ್ಹಿ. ಪಾಟೀಲ, ದೈಹಿಕ ನಿರ್ದೇಶಕರಾದ ಶ್ರೀ ಎ. ಕೆ. ಕಿಳ್ಳಿಕೇತ ಹಾಗೂ ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ಕುಮಾರಿ. ವೈಷ್ಣವಿ ಗಣಾಚಾರಿ ಉಪಸ್ಥಿತರಿದ್ದರು. ಡಾ. ಬಿ. ಎಮ್. ತುರಡಗಿ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕುಮಾರ ಗಿರೀಶ ಅಂಗಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಎಸ್. ಬಿ. ಹೊಸಮನಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

19 + one =