ಉಚಿತ ಸ್ಫಾತ್ಮಕ ತರಬೇತಿ ಲಾಭ ಪಡೆದುಕೊಳ್ಳಿ-ಸುರೇಶ ಸನದಿ.!

ಗೋಕಾಕ: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಅಂಗವಾಗಿ ಸ್ಫರ್ಧಾ ಗೋಕಾಕ ಕೋಚಿಂಗ ಸೆಂಟರನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಉಚಿತ ಸ್ಪರ್ಧಾತ್ಮಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಕೆಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಪಿಡಿಓ, ಪಿಸಿ, ಆರ್ಮಿ, ಎಸ್‌ಎಸ್‌ಸಿ, ಕೆಪಿಟಿಸಿಎಲ್ ಪರೀಕ್ಷಾ ತರಬೇತಿಯನ್ನು2೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದು, ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಈ ತರಬೇತಿಯ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕರ ಆಪ್ತ ಸಹಾಯಕ ಸುರೇಶ ಸನದಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8197689777, 7829084482 ಸಂಪರ್ಕಿಸಲು ಕೋರಲಾಗಿದೆ.
YuvaBharataha Latest Kannada News