Breaking News

ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮೆಚ್ಚುಗೆ!!

Spread the love

 

ನಿಷ್ಪಕ್ಷಪಾತ ವರದಿ ನೀಡುತ್ತಿರುವ ಕನ್ನಡಪ್ರಭ

ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮೆಚ್ಚುಗೆ!!

ಯುವ ಭಾರತ ಸುದ್ದಿ ಗೋಕಾಕ

ಸದೃಢ ಸಮಾಜ ರೂಪಿಸುವಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪ್ರಭ ದಿನಪತ್ರಿಕೆ ಸಂಪಾದಕರಾದ ರವಿ ಹೆಗಡೆ ನೇತೃತ್ವದಲ್ಲಿ ಕನ್ನಡಪ್ರಭ ಪತ್ರಿಕೆ ಶ್ರಮಿಸುತ್ತಿದ್ದು, ಪತ್ರಿಕೆ ಮತ್ತಷ್ಟೂ ಜನಪ್ರಿಯತೆ ಗಳಿಸಲಿ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಶುಭ ಹಾರೈಸಿದರು.

ನಗರದ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಕನ್ನಡಪ್ರಭ ಬೆಳಗಾವಿ ಆವೃತ್ತಿ ೨೫ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮಾಜದಲ್ಲಿಯ ಅಂಕುಡೊಂಕುಗಳನ್ನು ತಿದ್ದು ಸತ್ಯಾಂಶಗಳ ವರದಿ ಮಾಡುವುದೇ ನಿಜವಾದ ಪತ್ರಿಕಾ ಧರ್ಮ. ಈ ನಿಟ್ಟಿನಲ್ಲಿ ಕನ್ನಡಪ್ರಭ ದಿನ ಪತ್ರಿಕೆ ವಿಶಿಷ್ಟವಾದ ಸುದ್ದಿಗಳನ್ನು ಪ್ರಕಟಿಸಿ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತ ಬಂದಿದೆ ಎಂದು ಶ್ಲಾಘಿಸಿದರು.

ಸುದ್ದಿ ವಿಚಾರದಲ್ಲಿ ಯಾವುದೇ ರಾಜಿಯಾಗದೇ ನಿಷ್ಪಕ್ಷಪಾತ ವರದಿಗಾರಿಕೆಯಲ್ಲೂ ಕನ್ನಡಪ್ರಭ ಹೆಸರುವಾಸಿಯಾಗಿದೆ. ವಿಶಿಷ್ಟ ಸುದ್ದಿಗಳ ಜೊತೆ ಜೊತೆಗೆ ಉತ್ತಮವಾದ ಲೇಖನಗಳ ಮೂಲಕ ಜನಪ್ರಿಯತೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಸಂಭ್ರಮದ ವಿಶೇಷ ಪುರವಣಿ ಬಿಡುಗಡೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕನ್ನಡಪ್ರಭದ ಹಿರಿಯ ವರದಿಗಾರ ಭೀಮಶಿ ಭರಮನ್ನವರ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಎಂ ಎಲ್ ತೋಳಿನವರ, ಮುಖಂಡರಾದ ಲಕ್ಕಪ್ಪ ತಹಸೀಲ್ದಾರ್, ಲಕ್ಷ್ಮಣ ತಳ್ಳಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ಪವನ ಮಹಾಲಿಂಗಪುರ, ಗೋಕಾಕ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮೇಗೇರಿ, ಸಂತೋಷ ನೊಗನಾಳ, ಸತೀಶ ಮನ್ನಿಕೇರಿ, ಬಸವರಾಜ ಭಮನ್ನವರ, ವಿಶ್ವನಾಥ ಡಬ್ಬನವರ, ಸುರೇಶ ಕುಮರೇಶಿ, ಮಾಂತೇಶ ಕುರಬೇಟ ಸೇರಿದಂತೆ ಅನೇಕರು ಇದ್ದರು.

ಕನ್ನಡಪ್ರಭ ಸಂಪಾದಕರಾದ ರವಿ ಹೆಗಡೆ ತಂತ್ರಜ್ಞಾನದಲ್ಲಿ ಹೆಚ್ಚು ಪ್ರಾವಿಣ್ಯತೆ ಹೊಂದಿದ್ದು, ಅವರ ನೇತೃತ್ವದಲ್ಲಿ ಕನ್ನಡಪ್ರಭವು ಹೆಚ್ಚು ಕ್ರಿಯಾಶೀಲ ಹಾಗೂ ಸೃಜನಾತ್ಮಕ ಲೇಖನಗಳನ್ನು ಪ್ರಕಟಿಸುತ್ತಿದೆ. ಹೀಗಾಗಿ ಕನ್ನಡಪ್ರಭವು ತನ್ನದೇ ಆದ ಓದುವ ಬಳಗವನ್ನು ಹೊಂದಿದೆ. ರಾಜಕೀಯ ಸೇರಿದಂತೆ ಸಕಲ ರಂಗಗಳ ಸುದ್ದಿಗಳು ಎಲ್ಲ ವರ್ಗದ ಓದುಗರನ್ನು ತನ್ನತ್ತ ಹಿಡಿದುಕೊಳ್ಳುವಂತೆ ಮಾಡಿರುವ ಸಂಪಾದಕ ಹಾಗೂ ಬಳಗ ಕಾರ್ಯ ಶ್ಲಾಘನೀಯ.
ರಮೇಶ ಜಾರಕಿಹೊಳಿ ಮಾಜಿ ಸಚಿವರು, ಶಾಸಕರು.

ಕನ್ನಡಪ್ರಭ ವಿಶೇಷ ಸಂಚಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಬಿಡುಗಡೆಗೊಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕನ್ನಡಪ್ರಭದ ಹಿರಿಯ ವರದಿಗಾರ ಭೀಮಶಿ ಭರಮನ್ನವರ ಸನ್ಮಾನಿಸಿದರು.

 


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

sixteen + 4 =