ಟೇಕ್ವಾಂಡೊ ಚಾಂಪಿಯನ ಶೀಪ ವಿಜೇತ ಕ್ರೀಡಾಪಟುಗಳಿಗೆ ಶಾಸಕರಿಂದ ಸನ್ಮಾನ.!

ಗೋಕಾಕ: ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಟೇಕ್ವಾಂಡೊ ಚಾಂಪಿಯನ ಶಿಫನಲ್ಲಿ ತಾಲೂಕಿನ ಘಟಪ್ರಭಾ ಪಟ್ಟಣದ ಕ್ರೀಡಾಪಟುಗಳು ಭಾಗವಹಿಸಿ ಪಂದ್ಯಾವಳಿಯಲ್ಲಿ ಒಂದು ಬಂಗಾರದ ಪದಕ ಹಾಗೂ ಆರು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡ ವಿಜೇತ ಟೇಕ್ವಾಂಡೊ ಕ್ರೀಡಾ ಪಟುಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಟಿ.ಆರ್ ಕಾಗಲ, ಲಕ್ಷ್ಮೀಕಾಂತ ಎತ್ತಿನಮನಿ, ಸುರೇಶ ಸನದಿ, ಗಂಗಾಧರ ಬಡಕುಂದ್ರಿ, ಮಲ್ಲು ಕೋಳಿ, ರಾಮಣ್ಣ ಹುಕ್ಕೇರಿ, ಪ್ರವೀಣ ಮಟಗಾರ, ಸುರೇಶ ಪಾಟೀಲ, ಮಲ್ಲು ತುಕ್ಕಾನಟ್ಟಿ, ಈರಣ್ಣ ಕಲಗುಟಕಿ, ಮಾರುತಿ ಹುಕ್ಕೇರಿ, ಲಕ್ಷ್ಮಣ ಮೇತ್ರಿ ಸೇರಿದಂತೆ ಸನ್ಮಾನಿತ ಕ್ರೀಡಾಪಟುಗಳಾದ ಅನುಷ್ಕಾ ಮೇತ್ರಿ, ಸತೀಶ ಮೇತ್ರಿ, ಸುಶ್ಮಿತಾ ಮೇತ್ರಿ, ಗೋವಿಂದ ಮೇತ್ರಿ, ರಾಮಚಂದ್ರ ಬೀಳಗಿಕರ, ಸುಪ್ರೀತ ಕೊಂಕಣಿ, ಪ್ರೀತಮ ನಾಯಕ, ಅರ್ಜುನ ಬೀಳಗಿಕರ, ಗೋಪಾಲ ಪಾತ್ರುಟ, ಸಂತೋಷ ಹುನ್ನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
YuvaBharataha Latest Kannada News