ನೀಟ್ ಪರೀಕ್ಷೆ-ಪೂಜಾ ಮುಧೋಳ ಉತ್ತಮ ಸಾಧನೆ.!

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಜರುಗಿದ ರಾಷ್ಟç ಮಟ್ಟದ ನೀಟ್ ಪರೀಕ್ಷೆಯಲ್ಲಿ ತಾಲೂಕಿನ ಬೆಟಗೇರಿ ಗ್ರಾಮದ ಕುಮಾರಿ ಪೂಜಾ ಸುರೇಶ ಮುಧೋಳ ಉತ್ತಮ ಸಾಧನೆ ಮಾಡಿದ್ದಾರೆ.
ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಅವರು ೭೨೦ರ ಪೈಕಿ ೫೬೮ ಅಂಕ ಪಡೆದುಕೊಂಡು, ಗೋಕಾಕ ತಾಲೂಕು ಹಾಗೂ ಬೆಟಗೇರಿಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
YuvaBharataha Latest Kannada News