ದೇಶದ ಅಭಿವೃದ್ಧಿಯಲ್ಲಿ ಇಂಜನೀಯರರ ಸೇವೆ ಅಮೂಲ್ಯವಾಗಿದೆ-ಶಿವಾನಂದ ಹಿರೇಮಠ.!
ಗೋಕಾಕ: ದೇಶದ ಅಭಿವೃದ್ಧಿಯಲ್ಲಿ ರೈತರು, ಸೈನಿಕರಂತೆ ಇಂಜನೀಯರರ ಸೇವೆ ಅಮೂಲ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಅವರು, ನಗರದ ನಗರಸಭೆ ಸಮುದಾಯ ಭವನದಲ್ಲಿ ಗೋಕಾಕ ಇಂಜನೀರ‍್ಸ ಅಸೋಶಿಯೇಷನ್ ವತಿಯಿಂದ ಸರ್ ಎಮ್ ವಿಶ್ವೇಶ್ವರಯ್ಯಾ ಜನ್ಮದಿನಾಚರಣೆಯ ನಿಮಿತ್ಯ ಹಮ್ಮಿಕೊಂಡ ಇಂಜನೀರ‍್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವದರ ಜತೆಗೆ ನಗರದ ಸೌಂದರ್ಯಿಕರಣದಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ. ಸರ್ ಎಮ್ ವಿಶ್ವೇಶ್ವರಯ್ಯನವರು ನಾಡಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆದರ್ಶಗಳ ಪ್ರೇರಣೆಯಿಂದ ಇಂಜನೀಯರಗಳು ಜನತೆಗೆ ಗುಣಮಟ್ಟದ ಸೇವೆಯನ್ನು ನೀಡುವಂತೆ ಕರೆ ನೀಡಿದರು.
ಪರಿಸರ ಅಭಿಯಂತರ ಎಮ್ ಎಚ್ ಗಜಾಕೋಶ ಮಾತನಾಡಿ, ಆಧುನಿಕ ತಾಂತ್ರಿಕ ಜೀವನಶೈಲಿಯಲ್ಲಿ ನಾವು ಪರಿಸರ ರಕ್ಷಿಸಬೇಕಿದೆ. ಪರಿಸರ ರಕ್ಷಣೆಯಲ್ಲಿ ಇಂಜನೀಯರಗಳು ಮಹತ್ವವನ್ನು ನೀಡಬೇಕು. ಪರಿಸರವನ್ನು ಕಾಪಾಡಿ ಪ್ರಕೃತಿ ವಿಕೋಪಗಳನ್ನು ತಡೆಯುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ ಎಂದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಕಾರ್ಯನಿರ್ವಾಹ ಇಂಜನೀಯರ ವಿನೋದ ಪಾಟೀಲ, ಸ್ಟçಕ್ಚರಲ್ ಇಂಜನೀಯರ ಚಿದಂಬರ ಶಾಸ್ತಿç, ಗೋಕಾಕ ಇಂಜನೀಯರ ಅಸೋಶಿಯೇಷನ್ ಅಧ್ಯಕ್ಷ ರವೀಂದ್ರ ಉತ್ತೂರ, ಕಾರ್ಯಾಧ್ಯಕ್ಷ ಚಿದಾನಂದ ದೇಮಶೆಟ್ಟಿ ಇದ್ದರು.
ಕಿರಣ ಇಟ್ನಾಳ ಸ್ವಾಗತಿಸಿದರು, ಗಂಗಾಧರ ಶಿಂದೂರಿ ನಿರೂಪಿಸಿದರು, ವಿಶ್ವನಾಥ ಮಾಸ್ತಿಹೊಳಿ ವಂದಿಸಿದರು.