ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ವಾರ್ಷಿಕ ಸಭೆ ಉದ್ಘಾಟಿಸಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ.!
ಗೋಕಾಕ: ಭಾರತೀಯ ಜೀವವಿಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪ್ರತಿನಿಧಿಗಳು ವಿಮೆ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದು ಗ್ರಾಹಕರಿಗೆ ವಿಮೆ ಸೌಲಭ್ಯನೀಡುವ ಮೂಲಕ ಉತ್ತಮ ಸೇವೆ ಸಲ್ಲಿಸುವದರೊಂದಿಗೆ ಅವರ ಪರವಾರದ ಅಭಿವೃದ್ಧಿಗೆ ಶ್ರಮಿಸುವಂತೆ ಭಾರತೀಯ ಜೀವವಿಮಾ ಅಡ್ವೆöÊಸರಿ ಕಮೀಟಿ ಸದಸ್ಯ ಅರವಿಂದರಾವ ದೇಶಪಾಂಡೆ ಹೇಳಿದರು.
ಅವರು, ನಗರದ ಮಹಾಲಕ್ಷಿö್ಮÃ ಸಭಾ ಭವನದಲ್ಲಿ ಶನಿವಾರದಂದು ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡ ವಾರ್ಷಿಕ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವವಿಮಾ ಪ್ರತಿನಿಧಿಗಳು ತಮ್ಮ ವೃತ್ತಿಯಲ್ಲಿ ಹೆಚ್ಚಿನ ಅನುಭವ ಪಡೆದು ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ಪಾಲಿಸಿ ನೀಡಿ ವಿಮಾಸಂಸ್ಥೆಯ ಬೆಳವಣಿಗೆ ಜೊತೆಗೆ ತಾವು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆAದು ತಿಳಿಸಿದರು.
ಕಳೆದ ೨೯ವರ್ಷಗಳಿಂದ ನಿರಂತರವಾಗಿ ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ಸಂಘಟನೆ ಮೂಲಕ ಎಲ್ಲ ಪ್ರತಿನಿಧಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ವಿಧಾನ ಪರಿಷತ ಸದಸ್ಯ ಶಾಬಣ್ಣ ತಳವಾರ ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ಸಂಘಟನೆ ಸದಸ್ಯರು ತಮ್ಮ ಕಾಯ್ದ ಜೊತೆಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು.
ವೇದಿಕೆಯ ಮೇಲೆ ಬೆಳಗಾವಿ ಡಿವಿಸನಲ್ ಮ್ಯಾನೇಜರ್ ಅಜೀತ ವಾರಕರಿ, ಋಷಿಕೇಶ, ಬೆಳಗಾವಿ ಡಿವಿಸನಲ್ ಎಮ್ ಎಮ್ ಶ್ರೀಮತಿ ಜಾಕಲೀನ್ ಅಬ್ರಾಹಂ, ಬೆಳಗಾವಿ ವಿಭಾಗೀಯ ಎಲ್‌ಐಸಿ ಪ್ರತಿನಿಧಿಗಳ ವೇಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್ ಇ ಪಾಟೀಲ, ಕಜಾಂಚಿ ಟಿ ಪಿ ಜಾನಗೌಡ, ಕಾರ್ಯದರ್ಶಿ ಬಸವರಾಜ ಮುದ್ದಾಪೂರ, ಗೋಕಾಕ ಬ್ರಾö್ಯಂಚ್ ಅಧ್ಯಕ್ಷ ವಾಸು ಬಂಡಿನವರ, ಕಾರ್ಯದರ್ಶಿ ರುದ್ರಪ್ಪ ಗೋಕಾಕ, ಕಜಾಂಚಿ ಅಶೋಕ ಗೌಡರ ಸೇರಿದಂತೆ ಇತರರು ಇದ್ದರು.