ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ.
ಸಿಂದಗಿ: ಕಲಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಡ ಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟವಾಗಿದೆ.
ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಪ್ರಶಸ್ತಿಯನ್ನು ನಾಡು ಕಂಡ ಶ್ರೇಷ್ಠ ಲೇಖಕ, ಸಂಶೋಧಕ, ಕನ್ನಡ ಮತ್ತು ಬಸವಣ್ಣ ಇವರ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮತ್ತು ಕಾರ್ಯ ಮಾಡುವ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಯನ್ನು ಈ ಬಾರಿ ಡಾ ಶಶಿಕಾಂತ್ ಪಟ್ಟಣ ಅವರನ್ನು ಆಯ್ಕೆ ಮಾಡಲಾಗಿದೆ.
ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಕನ್ನಡ ಮತ್ತು ಬಸವಣ್ಣನವರ ಸೇವೆ ಕಾರ್ಯ ಮಾಡುವ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಯನ್ನು ಈ ಬಾರಿ ಸುಜಾತಾ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ವಚನ ಅಧ್ಯಯನ ವೇದಿಕೆ ಹಾಗೂ ಅಕ್ಕನ ಅರಿವು ಗುಂಪಿನ ಸಕ್ರಿಯ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುವುದು.
ಪ್ರಶಸ್ತಿಯ ಮೊತ್ತ ತಲಾ 10ಸಾವಿರ ರೂಪಾಯಿ ಹಾಗೂ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ನೆನಪಿನ ಕಾಣಿಕೆ ಕೊಡಲಾಗುವುದು. ಪ್ರತಿ ವರ್ಷ ಇವೆರಡು ಪ್ರಶಸ್ತಿಗಳನ್ನು ಕಲಬುರ್ಗಿ ಫೌಂಡೇಶನ್ ವಿಜಯಪುರ ಅವರ ವತಿಯಿಂದ ನೀಡಲಾಗುವುದು. ಪ್ರಶಸ್ತಿ ಪಡೆದ ಇಬ್ಬರು ಮಹನೀಯರನ್ನು ಜನೆವರಿ 07-01-2023 ರಂದು ಸಿಂದಗಿ ಪಟ್ಟಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಕನ್ನಡ ಹಾಗೂ ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಲಬುರ್ಗಿ ಫೌಂಡೇಶನ್ ಸಮಿತಿಯ ಸದಸ್ಯರಾದ ಡಾ ಎಂ ಎಂ ಪಡಶೆಟ್ಟಿ,ಡಾ ಲಿಂಗಣ್ಣ ಕಲಬುರ್ಗಿ, ಶ್ರೀಮತಿ ಲೀಲಾ ಕಲಬುರ್ಗಿ, ಶಿವಲಿಂಗಪ್ಪ ಕಲಬುರ್ಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.