Breaking News

ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ !

Spread the love

ಐವರನ್ನು ಗಡಿಪಾರು ಮಾಡಿದ ಬೆಳಗಾವಿ ಪೊಲೀಸ್ !

ಯುವ ಭಾರತ ಸುದ್ದಿ ಬೆಳಗಾವಿ  ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆ ಕೈಗೊಂಡ ಆರೋಪದ ಮೇರೆಗೆ ಮಾರ್ಕೆಟ್ ಪೊಲೀಸ್ ಠಾಣೆಯ ಎಸಿಪಿ ನಾರಾಯಣ ಬರಮನಿ ಅವರ ಶಿಫಾರಸ್ಸಿನ ಮೇರೆಗೆ ಡಿಸಿಪಿ ರವೀಂದ್ರ ಗಡಾದಿ ಅವರು ಐವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಂಜರಗಲ್ಲಿಯ ಮಹಮದ್ ರಫಿ ಮೋದಿನಸಾಬ ತಹಸೀಲ್ದಾರ(68), ಖಂಜರ್ ಗಲ್ಲಿಯ ನಿವಾಸಿ ಇಜಾರ ಅಹಮದ್ ಮಹಮದ್ ಇಸಾಕ್ ನೇಸರಿಕರ(48), ಮಾಳ ಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾಂಗ್ ವಾಡಿಯ ಜಾನಿ ಜಯಪಾಲ ಲೊಂಡೆ(36), ಕಣಬರ್ಗಿ ಪಾಟೀಲ ಗಲ್ಲಿಯ ಬೈರ ಗೌಡ ಜ್ಯೋತಿಬಾ ಪಾಟೀಲ(45) ಮತ್ತು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಡೆ ಬಜಾರ್ ನಿತಿನ್ ಪಾಂಡುರಂಗ ಪೇಡ್ನೇಕರ/ಪೆರನೇಕರ (50) ಅವರನ್ನು ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ.

ಮಟ್ಕಾ, ಜೂಜಾಟ, ಗಾಂಜಾ ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

19 − fourteen =