Breaking News

ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ-ಶಾಸಕ ಶಿವಾನಂದ ಎಸ್ ಪಾಟೀಲ.!

Spread the love

ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ-ಶಾಸಕ ಶಿವಾನಂದ ಎಸ್ ಪಾಟೀಲ.!


ಕೊಲ್ಹಾರ: ದೇಶದ ದಕ್ಷೀಣ ಹಿಂದುಸ್ಥಾನ ಭಾಗದಲ್ಲಿ ಕೇರಳ ರಾಜ್ಯ ಹೊರತುಪಡಿಸಿದರೆ ಸಾಕ್ಷರತೆ ಹಾಗೂ ಶಿಕ್ಷಣ ಕಲಿಕೆಯಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿ ಇದೆ ಎನ್ನುವದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಶಿವಾನಂದ ಎಸ್ ಪಾಟೀಲ ಹೇಳಿದರು.
ತಾಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪೂರ ತಾಲೂಕ ಪಂಚಾಯತ ಕೊಲ್ಹಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಕನ್ನಡ ಸರಕಾರಿ ಹಿರಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟಣೆ ಮತ್ತು ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತದ್ದರು.
ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ವೆಚ್ಚಮಾಡಿ ಅಧ್ಯಯನ ಮಾಡಿಸುವದಕ್ಕಿಂತ ನುರಿತ ವಿಷಯಾಧಾರಿತ ಅನುಭವವುಳ್ಳ ಶಿಕ್ಷಕರನ್ನು ಹೊಂದಿರುವ ಯಾವುದೇ ರೀತಿ ಹೊರೆಯಾಗದ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಲು ಅವಕಾಶ ಮಾಡಿಕೊಡುವದರಿಂದ ಮಕ್ಕಳು ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತದೆ ಅಲ್ಲದೇ ಆರ್ಥಿಕ ಸಬಲತೆಗೆ ಕಾರಣವಾಗುತ್ತದೆ ಎಂದರು.
ಹಿAದಿನ ಮತ್ತು ಇಂದಿನ ಕಾಲದ ಸರಕಾರಿ ಶಾಲೆಯಲ್ಲಿಯೇ ಕಲಿತ ಪ್ರತಿಭಾನ್ವಿತ ವಿಧ್ಯಾರ್ಥಿಗಳು ದೇಶದ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕ್ಷೇತ್ರಗಳಲ್ಲಿ ಉನ್ನತವಾದ ಹುದ್ದೆಯನ್ನು ಅಲಂಕರಿಸಿ ಭಾವಿ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಮಕ್ಕಳಿಗೆ ಐಟಿ ಬಿಟಿ ತಂತ್ರಜ್ಞಾನದ ಶಿಕ್ಷಣ ದೊರಕಿದರೆ ಆಧುನಿಕ ಶಿಕ್ಷಣ ಪದ್ದತಿಯ ಸೌಲಭ್ಯವನ್ನು ಪಡೆದು ಒಳ್ಳೆಯ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಈ ದಿಸೆಯಲ್ಲಿ ತಾಯಂದಿರು ದಿಟ್ಟ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಶಾಲೆಗೆ ಕಳಿಸುವ ವ್ಯವಸ್ಥೆಯತ್ತ ಗಮನಹರಿಸಬೇಕು ಎಂದು ಸಲಹೆ ಕೊಟ್ಟರು.
ಪುಟ್ಟ ಗ್ರಾಮವಾದ ನಾಗರದಿನ್ನಿಯ ಹೆಣ್ಣುಮಕ್ಕಳು ತಮ್ಮ ಮನೆಗಳ ಮುಂದೆ ಕಸ ಕಡ್ಡಿಯನ್ನು ಚೆಲ್ಲದೇ ಸುಂದರ ಸ್ವಚ್ಚಂದವಾದ ರಸ್ತೆಯನ್ನು ಇಟ್ಟುಕೊಂಡಿರುವದು ಹಲವು ಪಟ್ಟಣ ಗ್ರಾಮೀಣ ಪ್ರದೇಶಗಳಿಗೆ ಮಾದರಿಯ ಗ್ರಾಮವಾಗಿದ್ದು ಸರಕಾರಿ ಯೋಜಣೆಗಳನ್ನು ಸದ್ಬಳಕೆ ಮಾಡಿಕೊಳ್ಳುವಾಗ ಊರಿನ ನಾಗರಿಕರು ಒಗ್ಗಟ್ಟಿನ ಮಂತ್ರ ಜಪಿಸಿ ಅಭಿವೃದ್ದಿಯತ್ತ ಗಮನ ಹರಿಸಬೇಕು ಚುಣಾವಣೆ ಬಂದಾಗ ತಾವುಗಳು ಯಾವುದೇ ಪಕ್ಷದ ಅಭಿಮಾನಿಗಳಾಗಿರಬಹುದು ಚುಣಾವಣೆಯ ನಂತರ ಗ್ರಾಮಸ್ಥರು ರಾಜಕೀಯ ಬೆರಸದೇ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಲು ಸಿದ್ದರಿರಬೇಕು ಎಂದು ಕರೆಕೊಟ್ಟರು.
ಪಿ.ಯು.ರಾಠೋಡ, ತಾನಾಜಿ ನಾಗರಾಳ, ಗಿರೀಶ ಮನಗೂಳಿ ಮಾತನಾಡಿದರು. ನಾಗರದಿನ್ನಿ ಸದಾನಂದ ಆಶ್ರಮದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಲಲು ದೇಸಾಯಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಶಿವಾನಂದ ಕೋರಡ್ಡಿ, ಮಲಘಾನ ಗ್ರಾ.ಪಂ ಅಧ್ಯಕ್ಷ ಸುರೇಶ ವಠಾರ, ಮಸೂತಿ ಗ್ರಾ.ಪಂ ಅಧ್ಯಕ್ಷ ಸಂತೋಷ ಗಣಾಚಾರಿ, ಶಿಕ್ಷಣ ಸಂಯೋಜಕ ಜಿ.ಎಸ್.ಗಣಿಯವರ, ರಫೀಕ ಪಕಾಲಿ, ಎಸ್‌ಡಿಎಂಸಿ ಅಧ್ಯಕ್ಷ ರಂಗಣಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಗುರು ಚಲವಾದಿ, ಶರಣಗೌಡ ಪಾಟೀಲ, ಬಾಬು ನರಿ, ಸೇರಿದಂತೆ ನಾಗರದಿನ್ನಿ ಗ್ರಾಮದ ಅನೇಕ ಪ್ರಮುಖರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 × 3 =