ಬಿ.ಡಿ.ಪಾಟೀಲ ನೇತೃತ್ವದಲ್ಲಿ ಕುಮಾರಣ್ಣನ ಹುಟ್ಟುಹಬ್ಬ
ಯುವ ಭಾರತ ಸುದ್ದಿ ಇಂಡಿ: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬದ ನಿಮಿತ್ಯ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ನೇತೃತ್ವದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣ ಹಂಪಲ ವಿತರಣೆ ಮಾಡಿದರು.
ಈ ಸಂಧರ್ಬದಲ್ಲಿ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಮಾತನಾಡಿ ಕ£ರ್ನಾಟಕ ರಾಜ್ಯ ಕಂಡ ಅಪರೂಪದ ಮುಖ್ಯ ಮಂತ್ರಿ ಕುಮಾರಣ್ಣ ಎಂದರೆ ತಪ್ಪಾಗುವುದಿಲ್ಲ. ರೈತರ ಬಡವರ ದೀನ ದುರ್ಬಲರ ಕಂಡು ಮಮ್ಮಲ ಮರಗುವ ಏಕೈಕ ಮಾತೃಹೃದಯದ ರಾಜಕೀಯ ಮುತ್ಸದಿ, ಇಂಡಿ ತಾಲೂಕಿನ ನೀರಾವರಿ ಬಗ್ಗೆ ಚಿಂತನೆ ಮಾಡಿದವರಲ್ಲಿ ಅಂದಿನ ಪ್ರಧಾನ ಮಂತ್ರಿ ದೇವೆಗೌಡರು ಈ ಭಾಗದ ಹಸಿರು ಕ್ರಾಂತಿಗೆ ಕಾಲುವೆ ನಿರ್ಮಿಸಿದ ಭಗೀರಥ. ಮುಖ್ಯ ಮಂತ್ರಿ ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ರೈತರ ಬದುಕಿಗೆ ಆಶಾಕೀರಣವಾಗಿದ್ದಾರೆ ಇವರೋಬ್ಬರು ಯೋಜನೆಗಳ ಸರದಾರರಾಗಿದ್ದರು ಎಂದರು.
ಅಯುಬ ನಾಟೀಕಾರ ,ಶ್ರೀಶೈಲಗೌಡ ಬಿರಾದಾರ,ಸಿದ್ದು ಡಂಗಾ ಮಾತನಾಡಿದರು.
ಸಿದ್ದು ಡಂಗಾ, ಮಹಿಬೂಬ ಬೇನೂರ, ಬಸವರಾಜ ಹಂಜಗಿ, ಅಯುಬ ನಾಟೀಕಾರ, ಡಾ.ರಮೇಶ ರಾಠೋಡ, ಬಾಬು ಕಾಂಬಳೆ, ನಿಯಾಝ ಬಾಬು ಮೇತ್ರಿ, ಅಯಾಜ ಶೇಖ, ಇರ್ಪನ ಅಗರಖೇಡ, ರಫೀಕ ಸೋಡೆವಾಲೆ, ಮಲ್ಲು ಬಳಿಗಾರಿ, ಖಲೀಲ ತೋಳನೂರ, ನಾಗೇಶ ಹೆಡಡ್ಯಾಳ, ಸುನೀಲ ಭೂತಾಳಿ, ಸಲಿಂ ಮುಲ್ಲಾ, ಬಸವರಾಜ ಯಡಗಿ, ಭೀಮು ಕೋಳಿ, ಶಾಂತಯ್ಯಾ ಪತ್ರಿಮಠ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಇದ್ದರು.