Breaking News

ವರ್ಷದಲ್ಲಿ ನಡೆದ ಕಳ್ಳತನವೆಷ್ಟು ? ಬಂಧನವೆಷ್ಟು ?

Spread the love

ವರ್ಷದಲ್ಲಿ ನಡೆದ ಕಳ್ಳತನವೆಷ್ಟು ? ಬಂಧನವೆಷ್ಟು ?

ಯುವ ಭಾರತ ಸುದ್ದಿ ಬೆಳಗಾವಿ : ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಡೆದ 200 ಕಳ್ಳತನ ಪ್ರಕರಣ ಪತ್ತೆ ಮಾಡಿರುವ ಜಿಲ್ಲಾ ಪೊಲೀಸರು ಒಟ್ಟು 324 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ನಗದು ಸೇರಿದಂತೆ ಒಟ್ಟು 17 ಕೋಟಿ 54 ಲಕ್ಷ ರೂ. ಗಳ ಚಿನ್ನಾಭರಣ ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಕಳೆದುಕೊಂಡ ಸಾರ್ವಜನಿಕರಿಗೆ ಮರಳಿ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಸತೀಶಕುಮಾರ್ ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಒಂದು ವರ್ಷದ ಅವಧಿಯಲ್ಲಿ 201ಪ್ರಕರಣ ಪತ್ತೆ ಹಚ್ಚಿ 324 ಆರೋಪಗಳನ್ನು ಬಂಧಿಸಿದ ಬೆಳಗಾವಿ ಜಿಲ್ಲಾ ಪೊಲೀಸರು ಒಟ್ಟು 17 ಕೋಟಿ 54 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.

ಇದರಲ್ಲಿ 4 ಕೋಟಿ 18 ಲಕ್ಷ ಮೌಲ್ಯದ 8 ಕೆಜಿ 369ಗ್ರಾಂ ಚಿನ್ನ, 4 ಲಕ್ಷ 91ಸಾವಿರ ಮೌಲ್ಯದ 7ಕೆಜಿ ಬೆಳ್ಳಿ, 1 ಕೋಟಿ 24 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, 3 ಕೋಟಿ 99 ಲಕ್ಷ ಮೌಲ್ಯದ 24 ಮೋಟಾರ್ ವಾಹನಗಳು, 7 ಕೋಟಿ 47 ಲಕ್ಷ ನಗದು, 59 ಲಕ್ಷ ಮೌಲ್ಯದ ಮೊಬೈಲ್ ಸೇರಿ ಇತರೆ ವಸ್ತು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಬೆಳಗಾವಿಯ ಡಿಆರ್ ಮೈದಾನದಲ್ಲಿ ಸ್ವತ್ತುಗಳ ಪ್ರದರ್ಶನ ಮಾಡಲಾಯಿತು.
ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ್, ಎಎಸ್‌ಪಿ ಮಹಾನಿಂಗ ನಂದಗಾವಿ ಅವರಿಂದ ನಗದು ಚಿನ್ನಾಭರಣ ಕಳೆದುಕೊಂಡ ದೂರುದಾರರಿಗೆ ಹಸ್ತಾಂತರ ಮಾಡಲಾಯಿತು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

four × one =