ಹೊಟೇಲಿಗೆ ತೆರಳಿ ಉಪಹಾರದ ಗುಣಮಟ್ಟ ಪರೀಕ್ಷಿಸಿದ ಹರ್ಷ

ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಮಾಧ್ಯಮ ಪ್ರತಿನಿಧಿಗಳಿಗಾಗಿ ಕೀರ್ತಿ ಹೋಟೆಲ್ ನಲ್ಲಿ ಮಾಡಲಾಗಿರುವ ಊಟೋಪಹಾರ ವ್ಯವಸ್ಥೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಪರಿಶೀಲಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಉಪಹಾರ ಸೇವಿಸಿದ ಅವರು, ಪ್ರತಿದಿನ ಉತ್ತಮ ಊಟೋಪಾಹಾರ ಒದಗಿಸುವಂತೆ ತಿಳಿಸಿದರು.ಪ್ರತಿವರ್ಷದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಇಲಾಖೆಯ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ್, ಉಪ ನಿರ್ದೇಶಕ ಗುರುನಾಥ ಕಡಬೂರ, ರಾಮಲಿಂಗಪ್ಪ ಬಿ.ಕೆ., ಮಂಜುನಾಥ್ ಡೊಳ್ಳಿನ್, ಪುಟ್ಟಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
YuvaBharataha Latest Kannada News