ಬೆಳಗಾವಿ ಗಿಜರೆ ಆಸ್ಪತ್ರೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ
ಯುವ ಭಾರತ ಸುದ್ದಿ ಬೆಳಗಾವಿ :
ಇಲ್ಲಿಯ ಗಿಜರೆ ಆಸ್ಪತ್ರೆ ಮತ್ತು
ಮಜಗಾವಿಯ ಜಿಜಾವು ಮಹಿಳಾ ಮಂಡಳದ ವತಿಯಿಂದ ಮಜಗಾವಿಯ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಭಾತಕಾಂಡೆ ಶಾಲೆಯ ನಿವೃತ್ತ ಪ್ರಾಚಾರ್ಯೆ ಎಂ.ಎಸ್.ದಯಾ ಶಹಾಪುರಕರ ಮುಖ್ಯ ಭಾಷಣಕಾರರಾಗಿ, ಮಕ್ಕಳ ಪರೀಕ್ಷೆ ಬಗ್ಗೆ ಹಾಗೂ ಮೊಬೈಲ್ ಫೋನ್ ಬಳಕೆ ಕುರಿತು ಮಾರ್ಗದರ್ಶನ ಮಾಡಿದರು.
ಸಮಾಜ ಸೇವಕಿ ಶ್ರೀಮತಿ ಬೋಬಾಟೆ ಮುಖ್ಯ ಅತಿಥಿಯಾಗಿದ್ದರು. ಬೆಳಗಾವಿಯ ಖ್ಯಾತ ವೈದ್ಯರಾದ ಡಾ. ದತ್ತ ಪ್ರಸಾದ್ ಗಿಜರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಾರ್ಯನಿರ್ವಹಣಾಧಿಕಾರಿ ಅಕ್ಷತಾ, ವೇಣುಧ್ವನಿ ಮಾಜಿ ಸಂಚಾಲಕಿ ಸುನೀತಾ ದೇಸಾಯಿ, ಸರಸ್ವತಿ ಗ್ರಂಥಾಲಯದ ಗ್ರಂಥಪಾಲಕಿ ಸವಿತಾ ಪರನಟ್ಟಿ, ವೈಷ್ಣವಿ ಮುತಗೇಕರ ಅವರನ್ನು ಸನ್ಮಾನಿಸಲಾಯಿತು. ನಿವೇದಿತಾ ಮಜುಕರ್ ಪರಿಚಯಿಸಿದರು. ಡಾ.ಮಂಜುಷಾ ಗಿಜರೆ ನಿರೂಪಿಸಿದರು.
ಮಜಗಾವಿಯ ಮಹಿಳೆಯರು ಭಾಗವಹಿಸಿದ್ದರು.