ಗೋಕಾಕ : ವೈಮಾನಿಕ ಪ್ರಾತ್ಯಕ್ಷಿಕೆ
ಯುವ ಭಾರತ ಸುದ್ದಿ ಗೋಕಾಕ : ಇಲ್ಲಿನ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ೬ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗಾವಿ ವಾಯುಪಡೆ (ಏರಪೋರ್ಸ) ಅಧಿಕಾರಿಗಳು ಗುರುವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ವೈಮಾನಿಕ ಪ್ರಾತ್ಯಕ್ಷಿಕೆ ನಡೆಸಿದರು.
ಏರಪೋರ್ಸ ನ ವಿಂಗ್ ಕಮಾಂಡೋ ದೀಪಕ ಬಾವರಾ ವಿದ್ಯಾರ್ಥಿಗಳಿಗೆ ಯುದ್ಧ ವಿಮಾನ, ಯುದ್ಧ ವಿಮಾನಗಳ ಬಗ್ಗೆ ಮಾಹಿತಿ ನೀಡಿ ವಾಯುಪಡೆಯವರು ತಯಾರಿಸಿದ್ದ ವಿಮಾನಗಳ ಪ್ರಾತ್ಯಕ್ಷಿಕೆ ನಡೆಸಿ ವಿದ್ಯಾರ್ಥಿಗಳನ್ನು ರಂಜಿಸುವದರೊಂದಿಗೆ ಯುದ್ಧದ ಸಮಯದಲ್ಲಿ ವಾಯುಪಡೆ ಪಾತ್ರವನ್ನು ವಿವರಿಸಿದರು.
ವೈಮಾನಿಕ ಪ್ರಾತ್ಯಕ್ಷಿಕೆ ಕಣ್ಣಾರೆ ಕಂಡ ವಿದ್ಯಾರ್ಥಿಗಳ ಸಿಳ್ಳೆ, ಕರತಾಡನಗಳ ಶಬ್ದ ಮುಗಿಲುಮುಟ್ಟಿತ್ತು. ವೈಮಾನಿಕ ಪ್ರಾತ್ಯಕ್ಷಿಕೆ ಕಂಡು ವಿದ್ಯಾರ್ಥಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಂ.ಬಿ.ಬಳಗಾರ, ಸಹ ಕಮಾಂಡೋ ಸತೀಶ ಕುಮಾರ, ಸುದೀಪ್, ಎನ್.ಸಿ.ಸಿ. ಮುಖ್ಯಸ್ಥರಾದ ಬಸವರಾಜ ಹಂಜಿ, ಮೊಸೀನಖಾನ, ಶಿಕ್ಷಕರಾದ ಆರ್.ಎಲ್.ಮಿರ್ಜಿ, ಟಿ.ಬಿ.ಬಿಲ್, ಹಿರೇಮಠ ಉಪಸ್ಥಿತರಿದ್ದರು.
ಪೋಟೋ ಡಿ ೨೨ ಜಿಕೆಕೆ ೨&೨.೧&೩
ಗೋಕಾಕ : ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವೈಮಾನಿಕ ಪ್ರಾತ್ಯಕ್ಷಿಕೆ ನಡೆಸುತ್ತಿರುವ