ಬೆಳಗಾವಿ ಕಲಾವಿದ ಬಿಡಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸುಂದರ ರಂಗೋಲಿ
ಯುವ ಭಾರತ ಸುದ್ದಿ ಬೆಳಗಾವಿ :
ನಡೆದಾಡುವ ದೇವರು ಎಂದೇ ಕರೆಯಲ್ಪಡುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಕಲಾವಿದರು ಅವರ ಚಿತ್ರ ಬರೆಯುವ ಮೂಲಕ ಇದೀಗ ನಮನ ಸಲ್ಲಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ರಂಗೋಲಿ ಕಲಾವಿದ ಅಜಿತ ಔರವಾಡಕರ ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಸುಂದರ ರಂಗೋಲಿ ಬಿಡಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಡಗಾವಿ ಫೋಟೋ ಸ್ಟುಡಿಯೋದಲ್ಲಿ ಇದನ್ನು ಚಿತ್ರಿಸಲಾಗಿದೆ. ಈ ರಂಗೋಲಿಯನ್ನು ಬಿಡಿಸಲು ಏಳು ಗಂಟೆಗಳನ್ನು ತೆಗೆದುಕೊಂಡಿದ್ದಾರೆ, ಅವರು ರಂಗೋಲಿಯನ್ನು ಬಿಡಿಸಲು ಬಣ್ಣವನ್ನು ಬಳಸಿದ್ದಾರೆ. ಜನವರಿ 3 ರಿಂದ 6 ರವರೆಗೆ, ಸಾರ್ವಜನಿಕರು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ರಂಗೋಲಿ ನೋಡಬಹುದು.