Breaking News

ಗೋಕಾಕ : ಮಾಸಿಕ ಶಿವಾನುಭವ ಗೋಷ್ಠಿ

Spread the love

ಗೋಕಾಕ : ಮಾಸಿಕ ಶಿವಾನುಭವ ಗೋಷ್ಠಿ

ಯುವ ಭಾರತ ಸುದ್ದಿ ಗೋಕಾಕ :
ರೈತನೇ ಈ ಜಗದ ಶ್ರೇಷ್ಠ ಜೀವಿಯಾಗಿದ್ದು, , ಸಕಲರಿಗೂ ಅನ್ನ ನೀಡುವ ಕರ್ಮಯೋಗಿಯಾಗಿದ್ದಾನೆ ಎಂದು ನಂದಿ ಇಂಗಳಗಾಂವಿಯ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೧೬೧ ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವ್ಯಕ್ತಿ ಭವಬಂಧನದಿಂದ ಮುಕ್ತನಾಗಬೇಕಾದರೆ,ಶರೀರವನ್ನು ತೋಟವನ್ನಾಗಿ ಮಾಡಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಿದರೆ ಒಳ್ಳೆಯ ಸಮಾಜ ನಿರ್ಮಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮನುಷ್ಯ ಯಾವುದೇ ಹುದ್ದೆಯಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದೇ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಆ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸುತ್ತಿರುವ ಸಂಘ,ಸಂಸ್ಥೆಗಳು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ವೇದಿಕೆಯ ನೂತನ ಅಧ್ಯಕ್ಷಯನ್ನಾಗಿ ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ ಅವರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಹಾಗೂ ಮಾತ್ರಭೂಮಿ ಫೌಂಡೇಷನ್ ‘ ನ್ನು ಉದ್ಘಾಟಿಸಲಾಯಿತು.
ಬಟಕುರ್ಕಿ ಬಸವಲಿಂಗ ಮಹಾಸ್ವಾಮೀಜಿ, ಬಸನಗೌಡ ಪಾಟೀಲ, ಡಾ. ಸಿ.ಕೆ. ನಾವಲಗಿ, ಚಂದನ ಮಗದುಮ್, ಶ್ರೀಮತಿ ಸುಮಿತ್ರಾ ಕಾಳಪ್ಪಾ ಗುರಾಣಿ, ಶ್ರೀಮತಿ ಸುಗಂಧಾ ಡಂಬಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಸ್. ಕೆ. ಮಠದ ನಿರೂಪಿಸಿದರು, ಆರ್. ಎಲ್. ಮಿರ್ಜಿ ವಂದಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

eight + 3 =