ಕಿರಣ ಜಾಧವ ಜನ್ಮದಿನ : ಹರಿದು ಬಂದ ಶುಭಾಶಯಗಳ ಮಹಾಪೂರ !
ಯುವ ಭಾರತ ಸುದ್ದಿ ಬೆಳಗಾವಿ :
ಸಕಲ ಮರಾಠಾ ಸಮಾಜದ ಸಂಯೋಜಕ, ರಾಜ್ಯ ಬಿಜೆಪಿ ಒಬಿಸಿ ಕಾರ್ಯದರ್ಶಿ, ವಿಮಲ್ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕಿರಣ ಜಾಧವ ಅವರ ಜನ್ಮ ದಿನವನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕೇಕ್ ಕತ್ತರಿಸುವ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಗುರುವಾರ ಬೆಳಗ್ಗೆ ಕಿರಣ ಜಾಧವ ಅವರು ಜನ್ಮ ದಿನದ ಪ್ರಯುಕ್ತ ನಗರದ ಕಪಿಲೇಶ್ವರ ಮಂದಿರ ಹಾಗೂ ಚನ್ನಮ್ಮ ವೃತ್ತದ ಬಳಿ ಇರುವ ಗಣೇಶ ಮಂದಿರದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರ ಹಾಗೂ ಮರಾಠಾ ಸಮಾಜದ ಪರವಾಗಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಕಿರಣ ಜಾಧವ ಅವರ ಅಭಿಮಾನಿ ಬಳಗ, ಹಿರಿಯರು, ಸಂಘ ಸಂಸ್ಥೆಗಳ ಮುಖಂಡರು, ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು, ಸ್ನೇಹಿತರು ವಿವಿಧ ಬಿಜೆಪಿ ಮುಖಂಡರು ಕಿರಣ ಜಾಧವ ಅವರಿಗೆ ಶುಭಾಶಯ ಕೋರಿದರು.
ಇದಕ್ಕೂ ಮುನ್ನ ಕಿರಣ ಜಾಧವ ಅವರು ತಮ್ಮ ಜನ್ಮ ದಿನದ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಹೇಶ್ವರಿ ಅಂಧ ಮಕ್ಕಳ ಶಾಲೆಗೆ ತೆರಳಿ ಇಲ್ಲಿನ ಮಕ್ಕಳೊಂದಿಗೆ ತಮ್ಮ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದು, ವಿಶೇಷವಾಗಿತ್ತು. ಅಲ್ಲದೆ, ತಮ್ಮ ಜನ್ಮ ದಿನಕ್ಕೆ ಶುಭಾಶಯ ಕೋರಲು ಬರುವ ಅಭಿಮಾನಿ ಬಳಗಕ್ಕೆ ಕಿರಣ ಜಾಧವ ಅವರು ಯಾವುದೇ ತರದ ಹೂವಿನ ಬುಕ್ಕೆ ತಂದು ದುಂದು ವೆಚ್ಚ ಮಾಡುವ ಬದಲು ಬಡ ಮಕ್ಕಳಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕಿರಣ್ ಅವರಿಗೆ ವಿವಿಧ ಬಗೆಯ ಪುಸ್ತಕ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಣ ಜಾಧವ, ಬೆಳಗಾವಿಯ ಜನತೆ, ಅಭಿಮಾನಿ ಬಳಗ ನನ್ನ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ ಹೊಂದಿದ್ದು, ನಾನು ಅವರಿಗೆ ಚಿರಋಣಿಯಾಗಿರುತ್ತೇವೆ.
ಅಭಿಮಾನಿಗಳು ಇಟ್ಟಿರುವ ನನ್ನ ಮೇಲಿನ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಂಡು ಬಂದಿದ್ದೇನೆ. ಬರುವ ದಿನಗಳಲ್ಲಿಯೂ ಜನರ ಪ್ರೀತಿ, ವಿಶ್ವಾಸ, ನಂಬಿಕೆ, ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ವಿವಿಧ ಪಕ್ಷದ ನಾಯಕರು ಉಪಸ್ಥಿತರಿದ್ದರು.
ಅಭಿಮಾನಿಗಳಿಗೆ, ಜನರಿಗೆ ಅಲ್ಪೋಪಹಾರದ ವ್ಯವಸ್ಥೆ :
ಸಾವಿರಾರು ಸಂಖ್ಯೆಯಲ್ಲಿ ಕಿರಣ ಜಾಧವ ಅವರ ಜನ್ಮ ದಿನಾಚರಣೆಗೆ ಶುಭ ಕೋರಲು ಬಂದ ಅಭಿಮಾನಿಗಳ ಶುಭಾಶಯ ಸ್ವೀಕರಿಸಿದ ಕಿರಣ, ಬಂದ ಅಭಿಮಾನಿಗಳಿಗೆ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು. ರುಚಿಕರವಾದ ಜಿಲೆಬಿ, ಪಾವ್ ಬಾಜಿ ಸವಿದು ಕಿರಣ ಜಾಧವ ಅವರ ಅಭಿಮಾನಿಗಳು ಖುಷಿಯಿಂದ ತೆರಳಿದರು.
ಚಿರ ಋಣಿ :
ನನ್ನ ಜನ್ಮ ದಿನಾಚರಣೆಗೆ ಆತ್ಮೀಯ ಶುಭ ಕೋರಿದ ಎಲ್ಲ ನನ್ನ ಅಭಿಮಾನಿಗಳು, ಹಿರಿಯರು, ಮಹಿಳೆಯರು, ಯುವಕರ ನಂಬಿಕೆಗೆ ನಾನು ಋಣಿಯಾಗಿರುತ್ತೇನೆ. ನಿಮ್ಮ ಹಾರೈಕೆ ನನಗೆ ಶ್ರೀರಕ್ಷೆ.
-ಕಿರಣ ಜಾಧವ, ರಾಜ್ಯ ಬಿಜೆಪಿ ಒಬಿಸಿ ಕಾರ್ಯದರ್ಶಿ