ಮಹಾಲಿಂಗ ಮಂಗಿ, ರಾಜೇಶ್ವರಿ ಕಥಾ ಸಂಕಲನ ಲೋಕಾರ್ಪಣೆ
ಯುವ ಭಾರತ ಸುದ್ದಿ ಗೋಕಾಕ :
ಮನದಲ್ಲಿ ಮೂಡಿದ ವಿಚಾರಗಳನ್ನು ಶಬ್ದಗಳ ಮೂಲಕ ಪೊಣಿಸಿ ಪುಸ್ತಕ ರೂಪದಲ್ಲಿ ನಾಡಿಗೆ ನೀಡುವಲ್ಲಿ ಸಾಹಿತಿಗಳ ಪಾತ್ರ ಹಿರಿಯದಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಇಲ್ಲಿನ ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅವರು ರಚಿಸಿದ ೧೯ ಕೃತಿಗಳು ಮತ್ತು ರಾಜೇಶ್ವರಿ ಒಡೆಯ ಅವರ ಕಥಾ ಸಂಕಲನ ಮತ್ತು ಕವನ ಸಂಕಲನಗಳು ಲೋಕಾರ್ಪಣೆ ಸಮಾರಂಭ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದೇ ಸಮಯದಲ್ಲಿ ೨೧ ಕೃತಿಗಳನ್ನು ನೀಡಿರುವ ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದ ಅವರು ತಂತ್ರಜ್ಞಾನ ಮತ್ತು ಒತ್ತಡದ ಬದುಕಿನಲ್ಲಿ ಸಿಲುಕಿ ಯುವಕರು ಕನ್ನಡವನ್ನು ಮರೆಯುತ್ತಿದೇವೆ ಆದರೆ ಸಾಹಿತ್ಯದ ಮೂಲಕ ಸಾಹಿತಿಗಳು ಕನ್ನಡ ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಯುವ ಜನತೆಯು ಸಹ ತಮ್ಮ ಇಂತಹ ಸಾಹಿತಿಗಳ ಪುಸ್ತಕಗಳನ್ನು ಓದುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನವಳ್ಳಿ ಅವರು
ತಮ್ಮಲ್ಲಿರುವ ವಿದ್ಯೆಯನ್ನು ಬೇರೆಯವರೊಂದಿಗೆ ಹಂಚಿಕೊAಡು ಸಾಹಿತ್ಯವನ್ನು ಉಳಿಸುವ ಕಾರ್ಯ ಇಂದು ಆಗಬೇಕಾಗಿದೆ. ಇತ್ತೀಚೆಗೆ ಗೊಕಾಕ ನಾಡು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಮೇರು ಸಾಹಿತಿಗಳನ್ನು ಗೋಕಾಕ ನಾಡು ರಾಜ್ಯಕ್ಕೆ ನೀಡಿ ತನ್ನದೇ ಆದ ಛಾಪು ಮೂಡಿಸಿದೆ. ರಾಜ್ಯದಲ್ಲಿ ಕನ್ನಡ ಶಾಲೆಗಳು ನಡೆಸುತ್ತಿರುವ ಸಂಸ್ಥೆಗಳು ೧೦ ವರ್ಷ ಪೂರೈಸಿದರು ಸಹ ಸರಕಾರ ಇನ್ನು ಅನುದಾನವನ್ನು ನೀಡಿತ್ತಿಲ್ಲ ಆದಷ್ಟೂ ಬೇಗ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಿ ಕನ್ನಡ ಉಳಿಸಿ ಬೆಳೆಸುವಲ್ಲಿ ಸರಕಾರವೂ ಸಹ ಮುಂದಾಗಬೇಕು ಎಂದು ಮನವಿ ಮಾಡಿದರು.
ಕೃತಿಗಳ ಕುರಿತು ಡಾ. ಅಶೋಕ್ ನರೋಡೆ, ಡಾ.ವಾಯ್.ಎಂ ಯಾಕೊಳ್ಳಿ, ಪ್ರೋ. ಸಂಗಮೇಶ ಗುಜಗೊಂಡ , ಆರ್.ಎಲ್.ಮಿರ್ಜಿ ಮಾತನಾಡಿದರು.
ವೇದಿಕೆಯಲ್ಲಿ ಮಹಾಲಿಂಗ ಮಂಗಿ, ಅಶೋಕ ಪೂಜಾರಿ, ಡಾ.ರಾಜೇಂದ್ರ ಸಣ್ಣಕ್ಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಅಶೋಕಬಾಬು ನಿಲಗಾರ, ಶ್ರೀಮತಿ ರಜನಿ ಜಿರಗ್ಯಾಳ, ಸಲೀಮ ಧಾರವಾಡಕರ, ಶ್ರೀಮತಿ ರಾಜೇಶ್ವರಿ ಒಡೆಯರ, ಪ್ರಕಾಶಕ ಆರ್.ಶ್ರೀನಿವಾಸ ಮತ್ತು ವಾಯ್.ಎಂ ಭಜಮ್ಮನವರ, ಕೆಂಚಪ್ಪ ಪೂಜಾರಿ, ಡಾ.ಉದಯಕುಮಾರ್ ಒಡೆಯರ ಉಪಸ್ಥಿತರಿದ್ದರು.
ರಾಮಜಿ ಜಂಗನವರ ಪ್ರಾರ್ಥಿಸಿದರು, ಬಸವರಾಜ ಮುರಗೋಡ ಸ್ವಾಗತಿಸಿದರು, ಪ್ರೋ.ಶಿವಲಿಲಾ ಪಾಟೀಲ ನಿರೂಪಿಸಿದರು. ಬಿ.ಪಿ ಕಬಾಡಗಿ ವಂದಿಸಿದರು.