Breaking News

ಕೌಶಲ್ಯದ ಮೊದಲ ಮೆಟ್ಟಿಲು ಸ್ವಯಂ ಅರಿವು- ಶಿಕ್ಷಕ ಬಿಲ್

Spread the love

ಕೌಶಲ್ಯದ ಮೊದಲ ಮೆಟ್ಟಿಲು ಸ್ವಯಂ ಅರಿವು- ಶಿಕ್ಷಕ ಬಿಲ್

ಯುವ ಭಾರತ ಸುದ್ದಿ ಗೋಕಾಕ :
ತಾಲೂಕಿನ ಮಮದಾಪೂರದ ಬಲಭೀಮ (ಹೊರಗಿನ ಹಣಮಂತ ದೇವರ) ದೇವಸ್ಥಾನದ ಆವರಣದಲ್ಲಿ ಗ್ರಾಮದ ಸಾಮಾಜಿಕ ಕಳಕಳಿ ಹೊಂದಿದ ಮನಸ್ಸುಗಳ ಹೃದಯಗಳ ಆಶಯದಂತೆ ರಸಸವೀ ಫೌಂಡೇಶನ್ ಅಡಿಯಲ್ಲಿ ಪಾಕ್ಷಿಕ ‘ಜ್ಞಾನಾಕ್ಷಯ’ ಚಿಂತಕರ ಚಾವಡಿ 23ನೇ ಮಾಲಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗೋಕಾಕದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ (ಪ್ರೌಢ ವಿಭಾಗದ)ದ ಕನ್ನಡ ವಿಷಯ ಬೋಧಕರಾದ ಶ್ರೀ ಟಿ. ಬಿ. ಬಿಲ್ ಹಲವಾರು ನೈತಿಕ ಕಥೆಗಳನ್ನು ಹೇಳುತ್ತ ಸಮಯ ಪ್ರಜ್ಞೆ, ಉತ್ತಮ ಹವ್ಯಾಸ, ಚಿಂತನ ಶೀಲತೆ, ಯಶಸ್ಸಿನ ಗುಟ್ಟು, ಬದುಕುವ ಮಾರ್ಗಕ್ಕೆ ಸ್ವಯಂ ಅರಿವು ತಾಯಿಗೆ ಸಮಾನ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ನನ್ನನ್ನು ನಾನು ಅರಿಯುವುದರಿಂದ ನನ್ನ ದೌರ್ಬಲ್ಯ, ನನ್ನ ಸಾಮರ್ಥ್ಯವನ್ನು ತಿಳಿಯುವುದು ಸಾಧ್ಯ. ನನ್ನನ್ನು ನಾನು ನಂಬಿದರೆ, ಅರಿವಿನ ಜಾಗೃತಿ ಹೊಂದಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿಗಳ ಮನವನ್ನು ಪುಳಕಿತಗೊಳಿಸಿದರು. ದೇಮಶೆಟ್ಟಿಯವರು ವಿದ್ಯಾರ್ಥಿಗಳಿಗಾಗಿ ಏನಾದರು ಹೊಸದೊಂದನ್ನು ಕಾರ್ಯಕ್ರಮ ಹುಟ್ಟು ಹಾಕಿರುತ್ತಾರೆ. ಅವುಗಳ ಸದುಪಯೋಗ ಪಡೆದುಕೊಳ್ಳುವತ್ತ ಒಲವು ನೀಡಿ, ಚೆನ್ನಾಗಿ ಓದಿ ಮತ್ತೆ ಓದಿ ಓದುತ್ತಾ ಓದುತ್ತಾ ತಾವು ಯಶಸ್ಸಿನತ್ತ ಸಾಗಲು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿಕೊಂಡ ಗೋಕಾಕದ ಶ್ರೀ ಶಂಕರಲಿಂಗ ಪ್ರೌಢ ಶಾಲೆ ಸಹ ಶಿಕ್ಷಕರಾದ ಆಯ್ ಎಸ್. ಜನ್ಮಟ್ಟಿ ಯವರು ಕೂಡಿದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ, ಈ ವಯಸ್ಸಿನಲ್ಲೇ ತಾವು ವಿವಿಧ ಕ್ಷೇತ್ರಗಳ ಜ್ಞಾನ ಪಡೆದುಕೊಂಡು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಹಿರಿಯರಾದ ಸುರೇಶ ಜನ್ಮಟ್ಟಿ, ಶಿವಪ್ಪ ಪಟಗುಂದಿ ಉಪಸ್ಥಿತರಿದ್ದರು.

ಶಿಲ್ಪಾ ಗಾಣಗಿ ಮತ್ತು ಶ್ರೀದೇವಿ ಸಬರದರವರು ವಿಜ್ಞಾನ ಗೀತೆಯನ್ನು ಹಾಡಿದರು. ಸಂದೀಪ ಕಂಬಾರವರು ಸರ್ವರನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮವನ್ನು ಆಯೋಜಿಸಿದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಜ್ಞಾನಾಕ್ಷಯ ಚಿಂತಕರ ಚಾವಡಿ ಸಂಚಾಲಕ ರ. ವೀ ದೇಮಶೆಟ್ಟಿಯವರು ವಿದ್ಯಾರ್ಥಿಗಳೊಂದಿಗೆ ಗೌರವ ಸಮರ್ಪಿಸಿ ವಂದಿಸಿದರು. ಪುಷ್ಪಾ ಗಾಣಗಿಯವರು ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯ ಹಾದಿಮನಿಯವರು ನಿಜ ಶರಣ ಅಂಬಿಗರ ಚೌಡಯ್ಯನವರ ವಚನವನ್ನು ವಾಚಿಸಿದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

four + sixteen =