ರಹಮಾನ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಯುವ ಭಾರತ ಸುದ್ದಿ ಗೋಕಾಕ : ಸಮಾಜಸೇವೆಯಲ್ಲಿ ತೊಡಗುವವರು ಪರಸ್ಪರ ಸಹೋದರತ್ವದ ಭಾವನೆಗಳನ್ನು ಹೊಂದಿ ಸಮಾಜ ಸೇವೆ ಮಾಡಿದರೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೈದರಾಬಾದನ ಸಫಾ ಬೈತುಲ ಮಾಲ ಸಾಮಾಜಿಕ ಸಂಘಟನೆಯ ಅಧ್ಯಕ್ಷ ಹಜರತ ಮೌಲಾನಾ ಗಯಾಸ ಅಹ್ಮದ್ ರಶಿದಿ ಹೇಳಿದರು.
ರವಿವಾರದಂದು ನಗರದ ಲಕ್ಕಡಗಲ್ಲಿಯ ಅಹ್ಮದ್ ಶಾ ಶಾದಿ ಮಹಲನಲ್ಲಿ ಇಲ್ಲಿನ ರಹಮಾನ ಫೌಂಡೇಷನ್ ನವರ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಂಗವಾಗಿ ಹಮ್ಮಿಕೊಂಡ ” ಸಮಾಜ ಸೇವೆಯಲ್ಲಿ ಸಂಘಟನೆಗಳ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪ್ರೀತಿ, ವಿಶ್ವಾಸ ಮಾನವ ಜೀವನದ ಬೆನ್ನೆಲುಬಾಗಿದ್ದು, ಸಮಾಜದಲ್ಲಿ ಎಲ್ಲರನ್ನೂ ಒಗಡಿಸಲು ಪ್ರೀತಿಯಿಂದ ಮಾತ್ರ ಸಾಧ್ಯ. ದ್ವೇಷ ಅಸೂಯೆ ಬದಿಗೊತ್ತಿ ತಮ್ಮನ್ನು ತಾವು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಬಿದ್ದವರನ್ನು ಮೇಲೆತ್ತುವ ಕಾರ್ಯ ಸಮಾಜಿಕ ಸಂಘಟನೆಗಳಿಂದ ಆಗಬೇಕು. ನಿಸ್ವಾರ್ಥ ಸೇವೆಯನ್ನು ಸಂಘಟನೆಯ ಮುಖ್ಯ ದೇಹ್ಯವನ್ನಾಗಿಸಿಕೊಂಡು ಸಮಾಜದಲ್ಲಿ ನಿಜವಾದ ಬಡವರನ್ನು , ನಿರ್ಗತಿಕರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕಾರ್ಯವನ್ನು ಸಮಾಜಿಕ ಸಂಘಟನೆಗಳ ಮಾಡಬೇಕು .
ಸಮಾಜ ಸೇವೆಯಲ್ಲಿ ಸಕ್ರೀಯವಾಗಿರುವವರು ಜಾತಿ ಧರ್ಮವನ್ನು ಮೆಟ್ಟಿನಿಂತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ಅನುಷ್ಠಾನ ಗೋಳಿಸುವ ನಿಟ್ಟಿನಲ್ಲಿ ಸಮಾಜ ಸೇವಕರು ಕಾರ್ಯಪ್ರವೃತ್ತವಾಗಬೇಕು. ನಿರುದ್ಯೋಗಿ ಯುವಕರನ್ನು ಗುರುತಿಸಿ ಅವರಿಗೆ ಉದ್ಯೋಗ ಕೊಡಿಸುವುದು ಸಹ ಸಮಾಜ ಸೇವೆಯ ಅಂಗವಾಗಿದೆ. ಧರ್ಮಗಳು ಸಮಾಜ ಸೇವೆಯನ್ನು ಮಾಡುವ ರೀತಿಯನ್ನು ತೋರಿಸಿದೆ. ಅದನ್ನು ಮನಗಂಡು ನಾವೆಲ್ಲರೂ ಧರ್ಮಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದು ಸಮಾಜ ಸೇವೆಯಲ್ಲಿ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹಸಿದವರಿಗೆ ಅನ್ನ ನೀಡುವ ಪದ್ಧತಿ ಇಂದು ಮಾಯವಾಗಿದ್ದು, ಸಾವಿರಾರು ಬಡಜನರು ಹಸಿವಿನಿಂದ ಪರಿತಪ್ಪಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಅವರಿಗೆ ಒಂದು ತುತ್ತು ಅನ್ನ ನೀಡುವ ಕಾರ್ಯದ ಜೊತೆಗೆ ಸಮಾಜದ ಪ್ರತಿಯೊಂದು ಸ್ಥರದ ಜನರ ಹಕ್ಕುಗಳನ್ನು ದೊರಕಿಸುವ ನಿಟ್ಟಿನಲ್ಲಿ ಸಮಾಜ ಸೇವಾ ಸಂಘಟನೆಗಳು ಮುಂದಾಗಬೇಕು ಎಂದು ಹೇಳಿದರು.
ಮೌಲಾನಾ ಅಬ್ದುಲ್ಲಾರಹಮಾನಿ ಕೊಣ್ಣೂರ, ಹಾಜಿ ಸಲಿಮ ಅಮ್ಮಣಗಿ, ಖಾರಿ ಅಹ್ಮದಸಾಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.