ಗೋಕಾಕದಿಂದ 5 ನೇ ಬಾರಿಗೆ ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ
ಯುವ ಭಾರತ ಸುದ್ದಿ ಗೋಕಾಕ :
ದಿನಾಂಕ ೨೮ ರಿಂದ ೨೯ರ ವರೆಗೆ ಪಾದಯಾತ್ರೆ, ಶನಿವಾರ ದಿನಾಂಕ ೨೮ ರಂದು ಬೆಳಿಗ್ಗೆ ೫:೦೦ ಗಂಟೆಗೆ ಗೋಕಾಕ್ ದಿಂದ ಗುರುವಾರ ಪೇಟೆಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಮಂಗಳಾರತಿ ಮೂಲಕ ಪಾದಯಾತ್ರೆ ಹೊರಡುವುದು. ಸಾಯಂಕಾಲ ಗೋಕಾಕದಿಂದ ದುಂಡಾನಟ್ಟಿ ಕ್ರಾಸ್ ಮಮದಾಪುರ ಕ್ರಾಸ್ ನಾಯಕನಹಟ್ಟಿ ಕ್ರಾಸ್ ಶ್ರೀ ಸಿದ್ದಾರೂಢ ಮಠದಲ್ಲಿ ಮುಂಜಾನೆ ಏಳು ಗಂಟೆಗೆ ಭಕ್ತರಿಂದ ಉಪಹಾರ ನಂತರ ನಂದಿ ಕಟ್ಟಿ ಕ್ರಾಸ್
ತಾವಲಗೆರೆ ಕ್ರಾಸ್ ಯರಗಣಿವಿಯಿಂದ ಯರಗಟ್ಟಿ ಶ್ರೀ ದುರದುಂಡೇಶ್ವರ ಮಠದಲ್ಲಿ ರಾತ್ರಿ ೭:೦೦ ಕಾರ್ತಿಕೋತ್ಸವ ನಂತರ ಮಹಾಪ್ರಸಾದ ವ್ಯವಸ್ಥೆ. ದಿನಾಂಕ ೨೯ರಂದು ಶ್ರೀ ದುರದುಂಡೇಶ್ವರ ಮಠದಿಂದ ಬೆಳಗ್ಗೆ ನಾಲ್ಕು ಗಂಟೆಗೆ ಪಾದಯಾತ್ರೆ ಹೊರಡುವುದು. ಅಲ್ಲಿಂದ ತೋರಣಗಟ್ಟಿ ಕ್ರಾಸ್, ಕಟಗೋಳದಲ್ಲಿ ಮುಂಜಾನೆ ಏಳು ಗಂಟೆಗೆ ಉಪಹಾರ ಕಟಕೊಳ ಮಾರ್ಗವಾಗಿ ಶ್ರೀ ಕ್ಷೇತ್ರ ಗೊಡಚಿ ವೀರಭದ್ರ ದೇವಸ್ಥಾನಕ್ಕೆ ತಲುಪುವುದು ಮುಂಜಾನೆ ೧೦:೩೦ಕ್ಕೆ ಓಂಕಾರ ಆಶ್ರಮ ಕಪರಟ್ಟಿ ಕಳ್ಳಿಗುದ್ದಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ. ಮಧ್ಯಾಹ್ನ ೧೨ ಗಂಟೆಗೆ ದೇವರಿಗೆ ನೈವೇದ್ಯ ಮಾಡಿಸಿ ಜಂಗಮರಿಗೆ ಮಹಾಪ್ರಸಾದ ಗೊಡಚಿ ಶ್ರೀ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಮಹಾಪ್ರಸಾದ ಕಾರ್ಯಕ್ರಮ ಇರುತ್ತದೆ. ಅದೇ ರೀತಿಯಾಗಿ ಪಾದಯಾತ್ರೆ ಕಾರ್ಯಕ್ರಮಗಳು ಜರುಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಸೋಮಯ್ಯ ಹಿರೇಮಠ ೯೯೧೬೨ ೬೭೨೫೦ , ಮುರಿಗೆಪ್ಪ ಸೊಗಲಿ ೯೪೮೦೧೯೦೨೪೮, ಸುರೇಶ್ ಬೈರುಗೋಳ೯೮೮೬೯೪೨೮೯೯, ಶಂಕರ್ ಗಡ್ಡಿ ೯೬೦೬೫೩೬೩೦೫.