ಪಶು ವೈದ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಧಾರವಾಡ ಪಶುಸಂಗೋಪನೆ ಇಲಾಖೆ ಜಂಟಿ ನಿರ್ದೇಶಕ ಡಾ.ಪರಮೇಶ್ವರ ನಾಯ್ಕ.!

ಯುವ ಭಾರತ ಸುದ್ದಿ ಗೋಕಾಕ :
ಪಶು ಸಂಗೋಪನಾ ಇಲಾಖೆ ಧಾರವಾಡದ ಜಂಟಿ ನಿರ್ದೇಶಕ ಡಾ. ಜಿ ಪರಮೇಶ್ವರ ನಾಯ್ಕ ಅವರು ಕಾಲು ಬಾಯಿ ರೋಗದ ಲಸಿಕೆ ಕಾರ್ಯಕ್ರಮ ಪರಿಶೀಲಿಸಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ವೈದ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಶು ವೈದ್ಯರ ಸಭೆ ನಡೆಸಿ ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ನಿಸಪಕ್ಷಪಾತವಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ನಂತರ ನಗರದ ಯೋಗಿಕೊಳ್ಳ ರಸ್ತೆಯ ಗೊಶಾಲೆಗೆ ಭೇಟಿ ನೀಡಿ ಇಲಾಖೆವತಿಯಿಂದ ಮೇವು ಕತ್ತರಿಸುವ ಯಂತ್ರ ಹಾಗೂ ಔಷಧಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ, ಮುಖ್ಯ ವೈದ್ಯಾಧಿಕಾರಿ ಡಾ. ಶಶಿಕಾಂತ ಕೌಜಲಗಿ ಸೇರಿದಂತೆ ಪಶು ವೈದ್ಯರು ಇದ್ದರು.
YuvaBharataha Latest Kannada News