ವಿಶ್ವಕಪ್ ಕ್ರಿಕೆಟ್ : ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿದ ಭಾರತೀಯ ವೀರ ಮಹಿಳೆಯರು

ಯುವ ಭಾರತ ಸುದ್ದಿ ಕೇಪ್ ಟೌನ್ :
19 ವರ್ಷದ ರಿಚಾ ಘೋಷ್ 31 ಹಾಗೂ ರೋಡ್ರಿಗಸ್ 53 ಅವರ ಅತ್ಯಮೂಲ್ಯ ಬ್ಯಾಟಿಂಗ್ ನೆರವಿನಿಂದ ಭಾರತ ಇಂದು ವನಿತೆಯರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಗೆಲುವು ಸಾಧಿಸಿತು. ಪಾಕಿಸ್ತಾನವನ್ನು ಏಳು ವಿಕೆಟ್ ಅಂತರದಿಂದ ಸೋಲಿಸಿತು.
ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ತಂಡವು ಮಹಿಳೆಯರ ಟಿ 20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ಸೆಣಸಾಟ ನಡೆಸಿತು . ಭಾರತ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ . ಬಿಸ್ಮಾಮಾರೂಫ್ ಔಟಾಗದೆ 68 , ಆಯೇಷಾ ನಸೀಮ್ ಔಟಾಗದೆ 43 ರನ್ ಗಳಿಸಿ ತಂಡಕ್ಕೆ ಆಸರೆಯಾದರು . ಭಾರತದ ಪರ ರಾಧಾ ಯಾದವ್ 2 , ದೀಪ್ತಿ ಶರ್ಮಾ ಹಾಗೂ ಪೂಜಾ ತಲಾ ಒಂದೊಂದು ವಿಕೆಟ್ ಪಡೆದರು .
YuvaBharataha Latest Kannada News