Breaking News

ಯುದ್ದೋಪಾದಿಯಲ್ಲಿ ಬಿಜೆಪಿ ಬಲಪಡಿಸುವೆ : ಕಾರ್ಯಕರ್ತರಿಗೆ ರಣೋತ್ಸಾಹ ತುಂಬಿದ ರಮೇಶ ಜಾರಕಿಹೊಳಿ

Spread the love

ಯುದ್ದೋಪಾದಿಯಲ್ಲಿ ಬಿಜೆಪಿ ಬಲಪಡಿಸುವೆ : ಕಾರ್ಯಕರ್ತರಿಗೆ ರಣೋತ್ಸಾಹ ತುಂಬಿದ ರಮೇಶ ಜಾರಕಿಹೊಳಿ

ಯುವ ಭಾರತ ಸುದ್ದಿ ಗೋಕಾಕ:
ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರ ನಿಷ್ಠಾವಂತರ ಸೇವೆಯೆ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ಸಂಜೆ ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿಯ ಗೋಕಾಕ ವಿಧಾನಸಭಾ ಮತಕ್ಷೇತ್ರದ ಬೂತ್ ಅಧ್ಯಕ್ಷರ
ಹಾಗೂ ಪೇಜ್ ಪ್ರಮುಖರ ಸಭೆಯನ್ನು ಉದ್ಘಾಟಿಸಿ
ಮಾತನಾಡಿದರು. ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರೆ ಜೀವಾಳವಾಗಿದ್ದು, ಪಕ್ಷವು ಸಹ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಕಾರ್ಯಕರ್ತರ ಪರಿಶ್ರಮದಿಂದಲೆ ಪಕ್ಷವು ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಮುಂಬರುವ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೆ ಕಾರ್ಯ ಪ್ರವೃತ್ತರಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವದರೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಇಂದಿನ ಕಾರ್ಯಕರ್ತರ ಉತ್ಸಾಹವನ್ನು ನೋಡಿದರೆ ನನ್ನ 1999 ರ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ನೀವುಗಳು ನಿರ್ಮಿಸುವದು ನಿಶ್ಚಿತ. ಗೋಕಾಕ ಹಾಗೂ ಅರಭಾಂವಿಯ ಕ್ಷೇತ್ರಗಳ ಗೆಲುವಿನ ಜವಾಬ್ದಾರಿ ನಿಮ್ಮದಾಗಿದೆ. ಜಿಲ್ಲೆಯ ಹದಿನೆಂಟು ಕ್ಷೇತ್ರಗಳು ಹಾಗೂ ಇತರ ಜಿಲ್ಲೆಗಳಲ್ಲೂ ಪ್ರಚಾರ ನಡೆಸಿ, 150 ಸೀಟುಗಳೊಂದಿಗೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ನಾವು ಕಾರ್ಯಪ್ರವೃತ್ತರಾಗಿದ್ದೆವೆ ಎಂದರು.
ನಾವು ಮಾನವ ಧರ್ಮ ಒಂದೆ ಎನ್ನುವ ಬಸವಣ್ಣನವರ
ತತ್ವದಲ್ಲಿ ಕಾರ್ಯಪ್ರವೃತ್ತರಾಗೋಣ. ಜಾತಿ ಮತ ಭೇದ
ಮಾಡದೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡೋಣ. ಸಿಡಿಯಂತಹ ಮಹಾನ್ ನಾಯಕರಿಂದ ಕಾಂಗ್ರೇಸ್‌ಗೆ ಭವಿಷ್ಯವಿಲ್ಲದಂತಾಗಿದೆ. ದಿಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ನನಗೆ ನೀಡುತ್ತಿರುವ ಸಹಕಾರದಿಂದ ನನಗೆ ಈ ಪಕ್ಷಕ್ಕೆ ಬಂದಿದ್ದು
ಹೆಮ್ಮೆಯೆನಿಸುತ್ತಿದೆ. ನನಗೆ ಈಗ ಸಚಿವ ಸ್ಥಾನ ತಪ್ಪಿದರು
ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಮಾನ ದೊರೆಯುವುದು. ಈಗ ಜಿಲ್ಲೆಯಾಧ್ಯಂತ ಯುದ್ಧೋಪಾದಿಯಲ್ಲಿ ಪಕ್ಷ ಬಲಪಡಿಸಲು
ಕಾರ್ಯನಿರ್ವಹಿಸುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ಒಳ್ಳೆಯ
ಭವಿಷ್ಯವಿದ್ದು, ದೇಶದ ಅಭಿವೃದ್ಧಿ ಈ ಪಕ್ಷದಿಂದ ಮಾತ್ರ
ಸಾಧ್ಯವಿದೆ. ಕಾರ್ಯಕರ್ತರು ಮತ್ತೊಮ್ಮೆ ಅಧಿಕಾರಕ್ಕೆ
ಪಕ್ಷವನ್ನು ತರುವದರೊಂದಿಗೆ ರಾಮರಾಜ್ಯ ನಿರ್ಮಿಸಲು
ಶ್ರಮಿಸುವಂತೆ ಕರೆ ನೀಡಿದರು.

ಬಿಜೆಪಿ ವಿಶೇಷ ವಕ್ತಾರರಾಗಿ ಆಗಮಿಸಿದ್ದ ಆದರ್ಶ ಗೋಖಲೆ ಮಾತನಾಡಿ, ಆದರ್ಶ ಸಮಾಜ ನಿರ್ಮಾಣ ಮಾಡುತ್ತ ನಾವೆಲ್ಲ ಒಂದೆ ಭಾವನೆ ತುಂಬಿಸಿ, ಗತವೈಭವದ ಭಾರತವನ್ನು ನಿರ್ಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು. ದೇಹಿ ಭಾರತ ಧಾತಾ ಭಾರತವಾಗಿ ಬದಲಾಗುತ್ತಿದೆ. ನಮ್ಮ ಸ್ವಾಭಿಮಾನದ ಹಾಗೂ ಆತ್ಮ ವಿಶ್ವಾಸದ ಬದುಕನ್ನು ಮೋದಿಯವರು ನೀಡಿದ್ದಾರೆ. ಗೋಕಾಕ ಮತಕ್ಷೇತ್ರದಿಂದ ದಾಖಲೆಯ ಮತಗಳನ್ನು ಪಕ್ಷಕ್ಕೆ ನೀಡಿ ಮೋದಿಯವರನ್ನು
ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ನರ್ಮದಾ ನದಿಯ ಯೋಜನೆಯಂತೆ ಗೋಕಾಕದಲ್ಲೂ ಶಾಸಕ ರಮೇಶ ಜಾರಕಿಹೊಳಿ ಅವರು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಈ ಭಾಗಕ್ಕೆ ನಿರಂತರ ವಿದ್ಯುತ್ ಕುಡಿಯುವ ನೀರಿನೊಂದಿಗೆ ಶ್ರಮಿಸುತ್ತ ಜನರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ಲಕ್ಷ ದಾಖಲೆಯ ಅಂತರದಲ್ಲಿ ಅವರನ್ನು ಗೆಲ್ಲಿಸುವಂತೆ ಕೋರಿದರು.

ಬಿಜೆಪಿ ಪಕ್ಷದ ನಗರ ಮಂಡಲ ಅಧ್ಯಕ್ಷ
ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ
ರಾಜೇಂದ್ರ ಗೌಡಪ್ಪಗೋಳ, ಗೋಕಾಕ ವಿಧಾನಸಭಾ ಬಿಜೆಪಿ ಪ್ರಭಾರಿ ಮಹಾಂತೇಶ ವಕ್ಕುಂದ, ಒಬಿಸಿ ಮೋರ್ಚಾ ರಾಷ್ಟ್ರೀಯ ಕರ‍್ಯಕಾರಿಣಿ ಸದಸ್ಯ ಲಕ್ಷö್ಮಣ ತಪಸಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಇದ್ದರು. ಗೋಕಾಕ ವಿಧಾನಸಭಾ ಕ್ಷೇತ್ರದ ೨೮೮ ಬೂತ್‌ಗಳ ಅಧ್ಯಕ್ಷರುಗಳು, ೮ಸಾವಿರಕ್ಕೂ ಹೆಚ್ಚು ಪೇಜ್ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

9 + 6 =