ಭೀಕರ ಅಪಘಾತ ಸಹೋದರರ ದುರ್ಮರಣ

ಯುವ ಭಾರತ ಸುದ್ದಿ ಚಿಕ್ಕೋಡಿ :
ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದವರಾದ ಬೈಕ್ ನಲ್ಲಿ ಸಾಗುತ್ತಿದ್ದ ಶಿವಕುಮಾರ್ ರಾಜು ಘೋಸೆ ಮತ್ತು ಅವರ ಸಹೋದರ ಅಶ್ವಿನ್ ಕುಮಾರ್ ಅಪಘಾತಕ್ಕೆ ಬಲಿಯಾಗಿದ್ದಾರೆ.
ಬುಧವಾರ ಬೆಳಗ್ಗೆ ಚಿಕ್ಕೋಡಿ ತಾಲೂಕು ಬೆಳಕೂಡ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಇವರಿಗೆ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
YuvaBharataha Latest Kannada News