Breaking News

ಸವಣೂರು : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Spread the love

ಸವಣೂರು : ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಯುವ ಭಾರತ ಸುದ್ದಿ ಹಾವೇರಿ:
ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಹನುಮಂತಗೌಡ ಪಾಟೀಲ (54), ಪತ್ನಿ ಲಲಿತಾ ಪಾಟೀಲ (50) ಮತ್ತು ಮಗಳು ನೇತ್ರಾ (22) ಎಂದು ಗುರುತಿಸಲಾಗಿದೆ.
ಹನುಮಂತಗೌಡ ಅವರು ತಮ್ಮ ಏಕೈಕ ಪುತ್ರಿ ನೇತ್ರಾ ಅವರನ್ನು 7 ತಿಂಗಳ ಹಿಂದೆ ದಾವಣಗೆರೆಯ ಉಮಾ ಶಂಕರ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳ ವಿದ್ಯಾಭ್ಯಾಸ ಮತ್ತು ಮದುವೆಗಾಗಿ ಪಾಲಕರು ಸಾಲ ಮಾಡಿಕೊಂಡಿದ್ದರು. ಸುಮಾರು ₹25 ಲಕ್ಷ ಸಾಲವನ್ನು ತೀರಿಸಲು ಸಾಧ್ಯವಾಗದೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 1.5 ಎಕರೆ ಕೃಷಿ ಜಮೀನು ಹೊಂದಿದ್ದ ಹನುಮಂತಗೌಡ ತರಕಾರಿ ಬೆಳೆಗಾರರು. ಬುಧವಾರ ರಾತ್ರಿ ಮನೆಯಲ್ಲೇ ಮೂವರೂ ನೇಣಿಗೆ ಶರಣಾಗಿದ್ದು, ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿ ಮಗಳು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.


Spread the love

About Yuva Bharatha

Leave a Reply

Your email address will not be published. Required fields are marked *

seven + 17 =