Breaking News

ಗವಿಮಠ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆ ರವಿವಾರ

Spread the love

ಗವಿಮಠ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆ ರವಿವಾರ

ಯುವ ಭಾರತ ಸುದ್ದಿ ಬೆಳಗಾವಿ :
ಪ್ರಾ. ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ನೆಹರು ನಗರದ ನೂತನ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.

ರವಿವಾರ ಮಾರ್ಚ್‌ 5 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನಿಡಸೋಸಿ ದುರದುಂಡೇಶ್ವರ ಶ್ರೀಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಹಾಗೂ ಬೆಳಗಾವಿ ಕಾರಂಜಿಮಠದ ಪೂಜ್ಯ
ಗುರುಸಿದ್ಧೇಶ್ವರ ಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಕೆ.ಎಲ್.ಇ. ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಲಿದ್ದಾರೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ, ಪ್ರಾದೇಶಿಕ ಆಯುಕ್ತ ಮಹಾಂತೇಶ ಹಿರೇಮಠ ಅವರು ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ, ಸಾಹಿತಿ ಡಾ. ಗುರುಪಾದ ಮರಿಗುದ್ದಿ ಅಗಮಿಸುತ್ತಿದ್ದಾರೆ. ಡಾ. ಎಚ್.ಬಿ.ರಾಜಶೇಖರ, ಡಾ. ಎಫ್.ವಿ. ಮಾನ್ವಿ, ಪ್ರೊ. ಎಂ.ಎಸ್. ಇಂಚಲ, ಸುಭಾಷ ಏಣಗಿ, ಡಾ. ಸರಜೂ ಕಾಟಕರ, ಅಶೋಕ ಚಂದರಗಿ, ಯ.ರು. ಪಾಟೀಲ,
ಡಾ. ಗುರುದೇವಿ ಹುಲೆಪ್ಪನವರಮಠ, ಡಾ. ಮಹೇಶ ಗುರನಗೌಡರ, ಶಿರೀಷ ಜೋಶಿ ಹಾಗೂ ಲೇಖಕಿಯರ ಸಂಘದ ಸರ್ವಸದಸ್ಯರು ಉಪಸ್ಥಿತರಿರುವರು.
ರಂಗತಜ್ಞ ಡಾ. ರಾಮಕೃಷ್ಣ ಮರಾಠೆ ಹಾಗೂ ಮರುಳುಶಂಕರ ದೇವರು ಮಹಾಕಾದಂಬರಿ ರಚಿಸಿದ ಡಾ.ದಯಾನಂದ ನೂಲಿ, ಸಾಹಿತಿ ಬಸವರಾಜ ಗಾರ್ಗಿ ಅವರಿಗೆ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಗುವುದು ಎಂದು
ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಎಲ್.ವಿ. ಪಾಟೀಲ ಹಾಗೂ ಕಾರ್ಯದರ್ಶಿ ಅಕಬರ ಸನದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

five × four =