ಸವದತ್ತಿಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್ ವಶ
ಯುವ ಭಾರತ ಸುದ್ದಿ ಬೆಳಗಾವಿ :
ಸವದತ್ತಿ ಜೆಡಿಎಸ್ ಅಭ್ಯರ್ಥಿ ಸೌರಬ್ ಚೋಪ್ರಾ ಅವರಿಗೆ ಸೇರಿರುವ 42.92 ಲಕ್ಷ ಮೌಲ್ಯದ ಹೋಲಿಗೆ ಯಂತ್ರ ಮತ್ತು ಟಿಫಿನ್ ಬಾಕ್ಸ್ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಗೋದಾಮಿನಲ್ಲಿದ್ದ ಈ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಚುನಾವಣಾ ಅಧಿಕಾರಿಗಳು 42.92 ಲಕ್ಷ ರೂ . ಮೌಲ್ಯದ ಹೊಲಿಗೆ ಯಂತ್ರ , ಟಿಫಿನ್ ಬಾಕ್ಸ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ . ಸವದತ್ತಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸವದತ್ತಿಯ ಗೋದಾಮಿನ ಮೇಲೆ ದಾಳಿ ಮಾಡಿದ್ದು 23 ಲಕ್ಷ 84 ಸಾವಿರದ 272 ರೂ . ಮೌಲ್ಯದ 1012 ಹೊಲಿಗೆ ಯಂತ್ರ , 4.56 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳ 1200 ಟೇಬಲ್ಗಳು , 11 ಲಕ್ಷ 27 ಸಾವಿರ 840 ರೂ . ಮೌಲ್ಯದ 1060 ಐರನ್ ಸ್ಟ್ಯಾಂಡ್ , 3.24 ಲಕ್ಷ ಮೌಲ್ಯದ 2160 ಟಿಫಿನ್ ಬಾಕ್ಸ್ ಗಳು ಪತ್ತೆಯಾಗಿವೆ . ಜೆಡಿಎಸ್ ಅಭ್ಯರ್ಥಿ ಸೌರಭ್ ಚೋಪ್ರಾ ಭಾವಚಿತ್ರದ ಟಿಫಿನ್ ಬಾಕ್ಸ್ ಗಳು ಇದ್ದವು . ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .