ಬೆಳಗಾವಿ ಜಿಲ್ಲೆಯಲ್ಲಿ 27 ಸೇರಿದಂತೆ ರಾಜ್ಯದಲ್ಲಿ 1839 ಜನರಿಗೆ ಸೊಂಕು
ಬೆಳಗಾವಿ .ಜು.: ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಇಂದು 27 ಜನರಿಗೆ ಕೊರೊನಾ ಸೊಂಕು ತಗುಲಿದ್ದು ಇಂದು ಶನಿವಾರ ರಾಜ್ಯದಲ್ಲಿ ಒಟ್ಟು 1839 ಜನರಿಗೆ ಕೊರೊನಾ ಸೊಂಕು ತಗುಲಿದೆ. ರಾಜ್ಯದಲ್ಲಿ ಇಂದು 42 ಜನರು ಸಾವನ್ನಪ್ಪಿದ್ದು, 439 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬೆಳಗಾವಿ ನಗರದ ಕಂಗ್ರಾಳಿ ಕೆ.ಎಚ್. ಓರ್ವರು, ನೆಹರು ನಗರದಲ್ಲಿ ಓರ್ವರು, ಸುಭಾಷ ನಗರದಲ್ಲಿ ಮೂವರು, ಬೆಳಗಾವಿ ನಗರದಲ್ಲಿ ಇಬ್ಬರು, ಖಾಸಬಾಗದಲ್ಲಿ ಓರ್ವರು, ಕಡೋಲಿ ಗ್ರಾಮದಲ್ಲಿ ಮೂವರು, ಸವದತ್ತಿ ತಾಲೂಕಿನ ಕರುಕಟ್ಟಿ ಗ್ರಾಮದಲ್ಲಿ ಮೂವರು, ಖಾನಾಪುರ ತಾಲೂಕಿನ ಕರವಿನಕೊಪ್ಪ ಗ್ರಾಮದಲ್ಲಿ ಓರ್ವರು, ಅಥಣಿ ತಾಲೂಕಿನ ಗುಂಡೆವಾಡಿ, ಅನಂತಪುರದಲ್ಲಿ ಇಬ್ಬರು, ಝುಂಝುರವಾ, ಚಿಕ್ಕಟ್ಟಿ, ಸಂಕೊನಟ್ಟಿ, ಅಥಣಿ ಪಟ್ಟಣದಲ್ಲಿ ತಲಾ ಓರ್ವರು ಹಾಗೂ ಶೆಡಬಾಳ ಗ್ರಾಮದಲ್ಲಿ ನಾಲ್ವರಿಗೆ ಸೇರಿದಂತೆ ಒಟ್ಟು 27 ಜನರಿಗೆ ಕೊರೊನಾ ಸೊಂಕು ತಗುಲಿದೆ.
ರಾಜ್ಯದಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 1172, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 75, ಬಳ್ಳಾರಿ ಜಿಲ್ಲೆಯಲ್ಲಿ 73, ಬೀದರ ಜಿಲ್ಲೆಯಲ್ಲಿ 51, ಧಾರವಾಡ ಜಿಲ್ಲೆಯಲ್ಲಿ 45, ರಾಯಚೂರು ಜಿಲ್ಲೆಯಲ್ಲಿ 41, ಮೈಸೂರು ಜಿಲ್ಲೆಯಲ್ಲಿ 38, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸುಮಾರು ತಲಾ 37, ಮಂಡ್ಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 35, ಶಿವಮೊಗ್ಗ ಜಿಲ್ಲೆಯಲ್ಲಿ 31, ಹಾವೇರಿ ಜಿಲ್ಲೆಯಲ್ಲಿ 28, ಬೆಳಗಾವಿ ಜಿಲ್ಲೆಯಲ್ಲಿ 27, ಹಾಸನ ಜಿಲ್ಲೆಯಲ್ಲಿ 25, ಉಡುಪಿ ಜಿಲ್ಲೆಯಲ್ಲಿ 18, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 12, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯಲ್ಲಿ ತಲಾ 11, ದಾವಣಗೆರೆ ಜಿಲ್ಲೆಯಲ್ಲಿ 7, ಚಾಮರಾಜನಗರ ಜಿಲ್ಲೆಯಲ್ಲಿ 5, ಗದಗ ಜಿಲ್ಲೆಯಲ್ಲಿ 4, ಕೊಪ್ಪಳ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 3, ರಾಮನಗರ ಜಿಲ್ಲೆಯಲ್ಲಿ 2 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೊಂಕು ತಗುಲಿದೆ.
Check Also
ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ
Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …