Breaking News

ರೇಲ್ವೆ ಇಲಾಖೆ ಜನರ ಜೀವನಾಡಿ: ಸುರೇಶ ಅಂಗಡಿ

Spread the love

ರೇಲ್ವೆ ಇಲಾಖೆ ಜನರ ಜೀವನಾಡಿ: ರೈಲ್ವೆ ಸಚಿವ ಸುರೇಶ ಅಂಗಡಿ
ಬೆಳಗಾವಿ, ಜು.24: ರೇಲ್ವೆ ಇಲಾಖೆ ಜನರ ಜೀವನಾಡಿ , ಕೋವಿಡ್ -19 ಸಮಯದಲ್ಲಿಯೂ ವಲಸೆ ಕಾರ್ಮಿಕರಿಗೆ ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸಲು ಅವಕೂಲತೆ ಕಲ್ಪಿಸಿ, ಅವರಿಗೆಲ್ಲ ಕೇಂದ್ರ ಸರ್ಕಾರದ ಮನರೇಗಾ ಯೋಜನೆಯಡಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಹೇಳಿದರು.

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟೀಜ್ (CII) ಬೆಳಗಾವಿ ವತಿಯಿಂದ ನಡೆಸಲಾದ ನ್ಯೂ ಎಜ್ ಕನೇಕ್ಟಿವಿಟಿ ಮತ್ತು ಲಾಜಿಸ್ಟಿಕ್ಸ್ ವಿಷಯದ ಕುರಿತು ವಿಡಿಯೀ ಸಂವಾದದಲ್ಲಿ ಶುಕ್ರವಾರ ( ಜು.೨೪) ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರು ಭಾಗವಹಿಸಿ, ಲಾಜಿಸ್ಟಿಕ್ಸ್ ಹಾಗೂ ಸಪ್ಲಾಯ ಚೈನ್ ವಿಷಯದ ಮೇಲೆ ತಮ್ಮ ಅಭಿಪ್ರಾಯವನ್ನು ಮಂಡಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಯ ನಿರ್ಭರ ಭಾರತ ಯೋಜನೆಯಡಿ ಭಾರತ ದೇಶವನ್ನು ಅಭಿವೃದ್ಧಿ ಪತದತ್ತ ಕರೆದೊಯ್ಯ ಬಹುದಾಗಿದೆ ಇದರಿಂದಾಗಿ ದೇಶಗಳಲ್ಲಿರುವ ನಿರುದ್ಯೋಗಿ ಜನರಿಗೆ ಉದ್ಯೋಗಾವಕಾಶ ಲಭಿಸಲಾಗಿದೆ.‌

ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗಿದೆ. “ VOCAL FOR VOCAL ಅಡಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುವುದು ಇಂದಿನ ದಿನದಲ್ಲಿ ಅವಶ್ಯಕವಾಗಿದೆ. ಕೃಷಿ , ಜವಳ , ಆಹಾರ ಸಂಸ್ಕರಣ ಘಟಕ ಉಧ್ಯಮಗಳನ್ನು ಉವಕರು ಮುಂದೆ ಬರಬೇಕೆಂದು ಸಚಿವರು ಸಂವಾದದಲ್ಲಿ ಪ್ರತಿಪಾದಿಸಿದರು .

MAKE IN INDIA ಅಡಿ ದೇಶವನ್ನು ಸದೃಡಪಡಿಸಲು ಅನುಕೂಲವಾಗುತಿದ್ದೆ ಎಂದು ವೀಡಿಯೋ ಸಂವಾದದಲ್ಲಿ ರೇಲ್ವೆ ಸಚಿವರು ಪ್ರಸ್ತಾಪಿಸಿದರು.

GI ಅಧ್ಯಕ್ಷರು ಹಾಗೂ ಅಶೋಕ ಐರನ್ ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಜಯಂತ ಹುಂಜರವಾಡಿ, ಬೆಳಗಾವಿ ಏರ್ ಪೋರ್ಟ್ ನಿರ್ದೇಶಕರಾದ
ರಾಜೇಶ ಕುಮಾರ ಮೌರ್ಯ, CII ಇನ್ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಮಹಿಂಧರ ಹಾಗೂ ಇತರರು ಭಾಗವಹಿಸಿದರು .


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

one + 18 =