ರಸಗೊಬ್ಬರ ವೈಜ್ಞಾನಿಕ ಬಳಕೆಗೆ ಸಚಿವ ಸುರೇಶ್ ಅಂಗಡಿ ಸಲಹೆ
ಬೆಳಗಾವಿ, ಜುಲೈ 25 :ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಮರು ಬಿತ್ತನೆ ಕಾರ್ಯ ನಡೆಯುವುದರೊಂದಿಗೆ ವಾಣಿಜ್ಯ ಬೆಳೆ ಕಬ್ಬಿನ ಬೆಳೆಯ ಕ್ಷೇತ್ರದಲ್ಲಾದ ಹೆಚ್ಚಳ, ಕೊರೋನಾ ಮಹಾಮಾರಿಯಿಂದ ಉಂಟಾದ ಬೆಳೆ ನಷ್ಟದಿಂದ ಪಂರ್ಮಾಯ ಬೆಳೆಗಳ ನಿರಂತರ ಬಿತ್ತನೆ ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳ ಮೂಲಕ ನೀರನ್ನು ಒದಗಿಸಿದ ಹಿನ್ನೆಲೆಯಲ್ಲಿ ನಿರಂತರವಾಗಿ ಬಿತ್ತನೆ/ನಾಟಿ ಕಾರ್ಯ ನಡೆದಿರುವುದರಿಂದ ಯೂರಿಯಾ ರಸಗೊಬ್ಬರದ
ಬೇಡಿಕೆ ಮತ್ತು ಬಳಕೆ ಹೆಚ್ಚಾಗಿರುತ್ತದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಅಭಿಪ್ರಾಯ ಪಟ್ಟಿರುತ್ತಾರೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಸಕಾಲದಲ್ಲಿ ವ್ಯಾಪಕ ಮತ್ತು ಉತ್ತಮ ಮುಂಗಾರು ಮಳೆಬಂದಿದ್ದು, ಮುಂಗಾರು ಬಿತ್ತನೆ ಕಾರ್ಯ ಚುರುಕಿನಿಂದ ಸಾಗಿದ್ದು ಒಟ್ಟಾರೆ ನಿಗದಿ ಪಡಿಸಿದ 6,88,120 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿಗೆ ಹೋಲಿಸಿದಲ್ಲಿ ಈಗಾಗಲೇ 6,17,759 ಹೆಕ್ಟೇರ್ ಪ್ರದೇಶದಲ್ಲಿ ಆಹಾರಧಾನ್ಯಗಳ, ಎಣ್ಣೆಕಾಳುಗಳ ಮತ್ತು ವಾಣಿಜ್ಯ ಬೆಳೆಗಳ ಬಿತ್ತನೆ ಆಗಿದ್ದು ಬಿತ್ತನೆ ಕಾರ್ಯ ಇನ್ನೂ
ಮುಂದುವರೆದಿದೆ.
ಈ ಹಿನ್ನೆಲೆಯಯಲ್ಲಿ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಬೇಡಿಕೆ ಅತೀ ಹೆಚ್ಚಾಗಿರುತ್ತದೆ. ಪ್ರಸಕ್ತ
ಮುಂಗಾರು ಹಂಗಾಮಿನ ಜುಲೈ ಅಂತ್ಯದವರೆಗೆ ಹಂಚಿಕೆಯಾದ ಯೂರಿಯಾ ರಸಗೊಬ್ಬರ 88,532 ಮೆಟ್ಟರ್ ಟನ್ ಜೊತೆಗೆ ರೈತರ ಹೆಚ್ಚಿನ ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ರಸಗೊಬ್ಬರ ಮಂತ್ರಿಗಳಾದ ಸನ್ಮಾನ
ಸದಾನಂದಗೌಡರನ್ನು ಸಂಪರ್ಕಿಸಿರುವ ಸಚಿವ ಸುರೇಶ ಅಂಗಡಿಯವರು, ಜಿಲ್ಲೆಗೆ ಹೆಚ್ಚುವರಿ 15,000 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಆತಂಕ ಪಡುವ ಅವಶ್ಯ ಇರುವುದಿಲ್ಲಿ ಮುಂಗಾರು ಬಿತ್ತನೆಗೆ ಅವಶ್ಯವಿರುವಷ್ಟು ಮಾತ್ರ ಯೂರಿಯಾ
ರಸಗೊಬ್ಬರವನ್ನು ಖರೀದಿಸಿ ಕೃಷಿ ಇಲಾಖೆ ಸೂಚಿಸಿರುವ ರೀತಿಯಲ್ಲಿ ವೈಜ್ಞಾನಿಕವಾಗಿ ಬಳಸಬೇಕು ಎಂದು
ತಿಳಿಸಿರುತ್ತಾರೆ.
ಇದರೊಂದಿಗೆ ಅಧಿಕಾರಿಗಳು ಯೂರಿಯಾ ರಸಗೊಬ್ಬರ ಜಿಲ್ಲೆಯಾದ್ಯಂತ ಸರಿಯಾದ ಪ್ರಮಾಣದಲ್ಲಿ
ಪೂರೈಕೆಯಾಗುವಂತೆ ಮತ್ತು ಮಾರಾಟಗಾರರು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಮುನ್ನೆಚ್ಚರಿಕೆ
ವಹಿಸಬೇಕು ಎಂದು ಸಚಿವ ಅಂಗಡಿ ಅವರು ಸೂಚಿಸಿರುತ್ತಾರೆ.