ಸೌ ಇಂದುಮತಿ ಆವಾಡೆ ಜಿನೈಕ್ಯ
ಬೆಳಗಾವಿ. ಜು.24: ಇಚಲಕರಂಜಿ ಶಾಸಕ ಪ್ರಕಾಶ ಕಲ್ಲಪ್ಪಣ್ಣ ಆವಾಡೆ ಅವರ ಮಾತೃಶ್ರೀ ಮತ್ತು ಮಾಜಿ ಸಂಸದ ಹಾಗೂ ದಕ್ಷಿಣ ಭಾರತ ಜೈನ ಸಭೆಯ ಮಾಜಿ ಅಧ್ಯಕ್ಷ ಕಲ್ಲಪ್ಪಣ್ಣ ಆವಾಡೆ ಅವರ ಧರ್ಮಪತ್ನಿ ಸೌ ಇಂದುಮತಿ ಕಲ್ಲಪ್ಪಣ್ಣ ಆವಾಡೆ ಅವರು ಶನಿವಾರದಂದು ಜಿನೈಕ್ಯರಾದರು.
ಸೌ.ಇಂದುಮತಿ ಕಲ್ಲಪ್ಪಣ್ಣ ಆವಾಡೆ ಅವರು ಇಂದಿರಾಗಾಂಧಿ ಮಹಿಳಾ ಸೂತ ( ನೂಲು) ಗಿರಣಿಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಜೈನ ಸಮಾಜದ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.