.
ಮೂಡಲಗಿ: ಗೊಡಚಿನಮಲ್ಕಿ ಜಲಪಾತ ಕಣ್ಮನ ಸೆಳೆಯುವ ಅತ್ಯಂತ ಸುಂದರ ರಮಣ ೀಯ ಪ್ರವಾಸಿಗರ ತಾಣವಾಗಿದೆ ಆದರೆ ಸಂಭಂದಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಸಾಕಷ್ಟು ಪ್ರವಾಸಿಗರು ನಿರಾಸೆ ಪಡುವಂತಾಗಿದೆ ಜಲಪಾತಕ್ಕೆ ಮೂಲ ಸೌಕರ್ಯಗಳ ಕೊರತೆ,ಕುಡಿಯುವ ನೀರಿನ ಸಮಸ್ಯೆ,ಹದಗೆಟ್ಟ ರಸ್ತೆಗೆ ಡಾಂಬರಿಕರಣ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟಣೆಯ ತಾಲೂಕಾದ್ಯಕ್ಷ ಶಿವರಡ್ಡಿ ಹುಚರಡ್ಡಿ ನೇತೃದಲ್ಲಿ ಗುರುವಾರ ಕಲ್ಮೇಶ್ವರ ವೃತ್‍ದಲ್ಲಿ ಪ್ರತಿಭಟನೆ ನಡೆಸಿ ಗೋಕಾಕ ವಲಯ ಅರಣ್ಯಾಧಿಕಾರಿಗಳೆಗೆ ಮನವಿ ಸಲ್ಲಿಸಿದರು.
ಈ ಪ್ರವಾಸಿ ತಾಣ ನೋಡಲು ರಾಜ್ಯ,ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಂದ ಆದಾಯವೇನು ಕಡಿಮೆ ಇಲ್ಲ ಆದರೆ ಕುಡಿಯುವ ನೀರಿನ ವ್ಯವಸ್ಥೆ,ಸ್ವಚ್ಚತೆ,ರಸ್ತೆ,ಪ್ರವಾಸಿಗರಿಗೆ ಬದ್ರತೆ ಇಲ್ಲದಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನಾನುಕೂಲತೆ ಉಂಟಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಅವ್ಯವಸ್ಥೆ ಸರಿಪಡಿಸಬೇಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಉಪ ಅರಣ್ಯಾಧಿಕಾರಿ ಅಶೋಕ ಮಧುರಿ ಮನವಿ ಸ್ವೀಕರಿಸಿದರು.ಸಂಘಟಣೆಯ ತಾಲೂಕಾದ್ಯಕ್ಷ ಶಿವನಗೌಡ ಪಾಟೀಲ,ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಹುಚ್ಚನ್ನವರ,ಕುಮಾರ ಕಾತರಕಿ,ಮುತ್ತವ್ವ ಪಾಟೀಲ,ಲಕ್ಕವ್ವ ಚಿಪ್ಪರಗಿ,ಲಕ್ಷ್ಮೀ ಪಾಟೀಲ,ಶ್ರೀಕಾಂತ ಕರಿಗಾರ,ಭೀಮಶಿ ಕವಟಕೊಪ್ಪ,ಸಿದ್ಧಾರೂಡ ಮನ್ನಾಪೂರ,ಅಪ್ಪಾಸಾಬ ನದಾಫ,ಅರ್ಜುನ ಚಿಪ್ಪಲಕಟ್ಟಿ ಉಪಸ್ಥಿತರಿದ್ದರು.