ಮೂಡಲಗಿ: ವಿದ್ಯಾರ್ಥಿಗಳು ಮೊದಲು ಸಂಸ್ಕಾರಯುತವಾಗಿ ಮಾನವಿಯ ಮೌಲ್ಯಗಳನ್ನು ಹೊಂದಬೇಕು, ಪ್ರತಿಯೋಬ್ಬರು ಶಿಕ್ಷಣದಲ್ಲಿ ತಮ್ಮ ಸಾಮರ್ಥವನ್ನು ಹೆಚ್ಚಿಸಿಕೊಳ್ಳುವಲ್ಲಿ ಶ್ರಮೀಸಬೇಕೆಂದು ಇಲ್ಲಿಯ ತಹಶೀಲ್ದಾರ ಡಿ.ಜೆ.ಮಹಾತ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಲ್ಲಿಯ ಈರಣ್ಣಾ ದೇವಸ್ಥಾನದ ಕೆ.ಎಚ್.ಸೋನವಾಲ್ಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿದ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ 74 ಪ್ರೌಢಶಾಲೆಯ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶಾಲೆಗೆ ಪ್ರಥಮ ಸ್ಥಾನಪಡೆದ ವಿದ್ಯಾರ್ಥಿಗಳಿಗೆ ಅಭಿನಂಧನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಯಸ್ಸಸಿನ ಹಿಂದೆ ಪಾಲಕರ ಪಾತ್ರ ಬಹುಮುಖ್ಯವಾಗಿದೆ, ಪ್ರೋತ್ಸಾಹ ಪಾಲಕರಾದರೆ ಪ್ರಯತ್ನ ವಿದ್ಯಾರ್ಥಿಗಳಾಗಿರುತ್ತದೆ ಎಂದ ಅವರು ಮೂಡಲಗಿ ವಲಯದಲ್ಲಿ ಆಯ್.ಎ.ಎಸ್, ಆಯ್.ಪಿ.ಎಸ್ ಗಳಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಆಶೀಸಿದರು.
ಇಲ್ಲಿಯ ಪಶು ಆಸ್ಪತ್ರೇಯ ಸಹಾಯ ನಿರ್ದೇಶಕ ಡಾ: ಎಮ್.ವ್ಹಿ.ವಿಭೂತಿ ಮಾತನಾಡಿ, ಬಿ.ಇ.ಒ ಅಜೀತ ಮನ್ನಿಕೇರಿ ಅವರು ಮೂಡಲಗಿ ವಲಯದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ವಿಶಿಷ್ಟವಾದ ಕಾರ್ಯಕ್ರಮಗಳ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ವಿದ್ಯಾರ್ಥಿಗಳಿಗೆ ಮುಂದೆ ಹೆಚ್ಚಿನ ಸಾಧನೆಯ ಗುರಿಹೊಂದಲು ಕಠಿಣ ಪರಿಶ್ರಮವೆ ಯಶಸ್ವಿನ ಪ್ರಥಮ ಹೆಜ್ಜೆ, ಹೆಚ್ಚಿನ ಜ್ಞಾಣ ಮತ್ತು ತಿಳುವಳಿಕೆ ಹಾಗೂ ಗುರುವಿನ ಕೃಫೆಯಿಂದು ಹೆಚ್ಚು ಅಂಕಗಳಿಸಲು ಸಾಧ್ಯ ಎಂದರು.
ನೂತನವಾಗಿ ಅರಭಾಂವಿಯಲ್ಲಿ ಆರಂಭಗೊಂಡ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಉಮೇಶ ಬಡಕುಂದ್ರಿ ಮಾತನಾಡಿ, ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೆಕಿಂಗ್ ಮತ್ತು ಡಿಪ್ಲೋಮಾ ಇನ್ ಮೆಕೆಟ್ರೋನಿಕ್ಸ್ ಎರಡು ಕೋರ್ಸ್ ಆರಂಭವಾಗಿದ್ದು ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಜೋತೆ ಉದ್ಯೋಗದ ಸುವರ್ಣಾವಕಾಶಗಳಿವೆ ಎಂದು ತಿಳಿಸಿ ಕನ್ನಡ ಮಾಧ್ಯಮದಿಂದ ಬರುವ ವಿದ್ಯಾರ್ಥಿಗಳಿಗೆ ಆಗ್ಲ ಭಾಷೆಯ ಭಯವನ್ನು ಹೊಗಲಾಡಿಸಲು ಕ್ರಮಕೈಗೊಳ್ಳಲಾಗಿದೆ ಎಂದ ಅವರು ಕೇಂದ್ರ ಸೌಲಭ್ಯಗಳನ್ನು ಮತ್ತು ಕಲಿಕೆಯ ಪ್ರಯೋಜನೆಯನ್ನು ವಿವರಿಸಿದರು.
ಸಿಪಿಐ ವೆಂಕಟೇಶ ಮುರನಾಳ, ಬಿಇಒ ಅಜೀತ ಮನ್ನಿಕೇರಿ, ಶ್ರೀಮತಿ ಟಿ.ಬಿ.ಹೊಸಮನಿ ಮತ್ತು ವಿದ್ಯಾರ್ಥಿಗಳಾದ ನಿಖಿತ ಮನ್ನಿಕೇರಿ, ಶಿವಾಣ ಭೈಲವಾಡ ಮಾತನಾಡಿದರು.
ಸಮಾರಂಭ ವೇದಿಕೆಯಲ್ಲಿ ಮುಖ್ಯೋಪಾಧ್ಯಯರಾದ ಪಿ.ಬಿ.ಮದಬಾಂವಿ, ಎಮ್.ಜಿ.ಹತ್ತಿ, ಎಮ್.ಸಿ.ಅಗಸಗಿ, ಶಿಕ್ಷಣ ತಜ್ಞ ಶ್ರೀಧರ ಜೋಷಿ, ಡಾ: ಪ್ರಶಾಂತ ಕುರಬೇಟ ಮತ್ತಿತರು ಇದ್ದರು. ಬಿಇಒ ಎ..ಸಿ.ಮನ್ನಿಕೇರಿ ಸ್ವಾಗತಿಸಿದರು, ಟಿ.ಬಸವರಾಜ ನಿರೂಪಿದರು, ಸಿ.ಬಿ.ಪೂಜೇರಿ ವಂದಿಸಿದರು.