Breaking News

ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮತ ಬ್ಯಾಂಕ ಆಗಿ ಬಳಸಿ ಕೊಳ್ಳುತಿದ್ದಿದೆ:ಮಲ್ಲಿಕಾರ್ಜುನ ಚೌಕಶಿ!!

Spread the love

 

ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮತ ಬ್ಯಾಂಕ ಆಗಿ ಬಳಸಿ ಕೊಳ್ಳುತಿದ್ದಿದೆ:ಮಲ್ಲಿಕಾರ್ಜುನ ಚೌಕಶಿ!!

ಯುವ ಭಾರತ ಸುದ್ದಿ,  ಬೆಳಗಾವಿ: ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮತ ಬ್ಯಾಂಕ ಆಗಿ ಬಳಸಿ ಕೊಳ್ಳುತಿದ್ದು ಅದು ಖಂಡನೀಯ 2006 ರಲ್ಲಿ ಹುಬ್ಬಳ್ಳಿಯ ನೆಹರು ನಗರದಲ್ಲಿ ನಡೆದ ಉಪ್ಪಾರರ ಬ್ರಹತ್ ಸಮಾವೇಶದಲ್ಲಿ ಉಪ್ಪಾರ ಸಮಾಜದ ಲಕ್ಷ್ಮಣ ಉಪ್ಪಾರ ಅವರನ್ನು ಎಂಎಲ್ಸಿ ಮಾಡುವುದಾಗಿ ಹಾಗೂ ಉಪ್ಪಾರರನ್ನು ಎಸ್ಟಿ ಪಟ್ಟಿಗೆ ಸೇರಿಸುವುದಾಗಿ ಅಂದಿನ ಉಪಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಭರವಸೆ ನೀಡಿದ್ದರು ಆದರೆ ಅದು ಇಂದಿನವರೆಗೂ ಈಡೆರಿಸಿಲ್ಲ.

ರಾಜ್ಯದಲ್ಲಿ  ಸುಮಾರು 40 ಲಕ್ಷ ಉಪ್ಪಾರರಿದ್ದು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಉಪ್ಪಾರರು ಬೆಳಗಾವಿ ಜಿಲ್ಲೆಯಲ್ಲಿ ಇದ್ದಾರೆ.

ಬೆಳಗಾವಿ ಎಂಪಿ ಚುನಾವಣೆಯ ಬಿಜೆಪಿ ಟಿಕೇಟನ್ನು ಹಿಂದಿನಿಂದಲೂ ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿ ಪಕ್ಷದಲ್ಲಿ ಗುರುತಿ ಕೊಂಡಿರುವ ಉಪ್ಪಾರ ಸಮಾಜದ ಶಾಮಾನಂದ ಪೂಜೇರಿ, ವಾಸುದೇವ ಸವತಿಕಾಯಿ, ಲಕ್ಕಪ್ಪ ತಹಶೀಲ್ದಾರ, ಶಂಕರ ಬಿಲಕುಂದಿ ಅಥವಾ ಮೂಡಲಗಿಯ ಉಪ್ಪಾರ ಸಮಾಜದ ನಾಯಕರಾದ ಭೀಮಶಿ ಹಂದಿಗುಂದ ಅವರಿಗೆ ನೀಡಬೇಕು. ಮತ್ತು ಹುಬ್ಬಳ್ಳಿಯ ಲಕ್ಷ್ಮಣ ಉಪ್ಪಾರ ಅವರನ್ನು ರಾಜ್ಯಸಭೆ ಅಥವಾ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು.

ಬೆಳಗಾವಿ ಡಿಸಿಸಿ ಬ್ಯಾಂಕಿನ ಸರ್ಕಾರದ ನಾಮನಿರ್ದೇಶಕರನ್ನಾಗಿ ಗೋಕಾಕ ತಾಲ್ಲೂಕಿನ ಯಾವುಲಾರಮದರೊಬ್ಬ ಉಪ್ಪಾರ ನಾಯಕರನ್ನು ನಿಯಮಿಸಬೇಕು.

ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ಕೇವಲ 2.5 ಕೋಟಿ ರೂಪಾಯಿ ಹಣವಿದ್ದು 100 ಕೋಟಿ ಹಣ ನೀಡಬೇಕು.

ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ರದ್ದು ಮಾಡಿದ್ದು ಉಪ್ಪಾರರಿಗೆ ಹಾಗೂ ಸಮಾಜದ ಪೀಠಕ್ಕೆ ಮಾಡಿದ ಅವಮರ್ಯಾದೆ ಆಗಿದ್ದು. ನಿಗಮಕ್ಕೆ ಗೋಕಾಕ ತಾಲೂಕಿನ ಒಬ್ಬರನ್ನ ಅಧ್ಯಕ್ಷರಾಗಿ ನೇಮಕ ಮಾಡಬೇಕು.

ಬೆಳಗಾವಿ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿ ಭಗೀರಥ ಭವನ ನಿರ್ಮಾಣ ಮಾಡಲು ಉಚಿತ ನೀವೆಶನ ಹಾಗೂ ಅನುದಾನ ನೀಡಬೇಕು.

ಉಪ್ಪಾರ ಸಮಾಜವನ್ನ ಎಸ್ಟಿಗೆ ಸೇರಿಸಬೇಕು.

ಇತರೆ ಪ್ರಮುಖ ನಿಗಮ ಮಂಡಳಿಗಳಿಗೆ ಉಪ್ಪಾರರನ್ನು ನೀಯಮಿಸಬೇಕು.

ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿಂದರೆ ಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಉಪ್ಪಾರರು ಪ್ರತ್ಯೇಕ ಅಭ್ಯರ್ಥಿಯನ್ನು ನಿಲ್ಲಿಸ ಬೇಕಾಗುತ್ತದೆ. ಇಲ್ಲವೆ ಉಪ್ಪಾರ ಸಮಾಜ ನೋಟಾಗೆ ಮತ ನೀಡ ಬೇಕಾಗುತ್ತದೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿರುವ ಎಲ್ಲ ಕ್ಷೇತ್ರಗಳಲ್ಲಿ ಉಪ್ಪಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು ಎಲ್ಲ ಕ್ಷೇತ್ರಗಳಲ್ಲೂ ಉಪ್ಪಾರರು ಬಿಜೆಪಿ ಪಕ್ಷವನ್ನು ಮಾತ್ರ ಬೆಂಬಲಿಸಿದ್ದು, ನಾಳೆ ನಾಡಿದ್ದು ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.

ಎಂದು ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

fourteen + ten =