ಯುವಕನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿ ಬಿಟ್ರು!

ಯುವ ಭಾರತ ಸುದ್ದಿ, ಬೆಳಗಾವಿ: ಪಕ್ಕದ ಮನೆಯವರ ಮದುವೆ ಮುಗಿಸಿಕೊಂಡು ಬಂದ ಯುವಕನನ್ನು ಹೊರಗೆ ಕರೆದುಕೊಂಡು ಹೋಗಿ ಸ್ನೇಹಿತರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜುನೆ(ಹಳೆ) ಬೆಳಗಾವಿಯ ಅಂಬೇಡ್ಕರ ಗಲ್ಲಿಯಲ್ಲಿ ನಡೆದಿದೆ.
ಜುನೆ ಬೆಳಗಾವಿಯ ಅಂಬೇಡ್ಕರ ಗಲ್ಲಿಯ ರಥ ಗಲ್ಲಿಯಲ್ಲಿ ಕೊಲೆ ನಡೆದಿದ್ದು. ಕೊಲೆಯಾದ ಯುವಕ ಜಯಪಾಲ್ ಮಸನೂ ಘರಾನೆ(೩೭) ಎಂದು ಗುರುತಿಸಲಾಗಿದೆ.
ಕೊಲೆಯಾದ ಯುವಕನನ್ನು ಬುಧವಾರ ತಡರಾತ್ರಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿರುವ ಸ್ನೇಹಿತರು ಮನೆ ಮುಂದಿನ ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯಾದ ಯುವಕನಿಗೆ ಪತ್ನಿ, ಮೂವರು ಮಕ್ಕಳು ಸೇರಿದಂತೆ ತಂದೆ-ತಾಯಿ ಇದ್ದಾರೆ. ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ, ಶಹಾಪುರ ಸಿಪಿಐ ರಾಘವೇಂದ್ರ ಹವಾಲ್ದಾರ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಕೊಲೆ ಮಾಡಿದ ಆರೋಪಿಗಳಿಗೆ ಬಲೆ ಬೀಸಿದ್ದಾರಡ. ಕೊಲೆ ಮಾಡಿದವರನ್ನು ಹುಡುಕಾಡಲು ಪೊಲೀಸ್ ತಂಡ ರಚಿಸಲಾಗಿದೆ.
YuvaBharataha Latest Kannada News