ಚುನಾವಣೆ ಗೆಲ್ಲಲು ಮಾಟ-ಮಂತ ಮಾಡಿದ ಕುತಂತ್ರಿ ಅಭ್ಯರ್ಥಿಗಳು
ಯುವ ಭಾರತ ಸುದ್ದಿ, ಗೋಕಾಕ್: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೇಗಾದರೂ ಮಾಡಿ, ಜನರನ್ನು ಮೋಸಗೊಳಿಸಿ ಗೆಲ್ಲಬೇಕೆಂಬ ಕುತಂತ್ರ ನಡೆಸಿರುವ ಕೆಲವು ಕುತಂತ್ರಿ ಅಭ್ಯರ್ಥಿಗಳು ಮಾಟ-ಮಂತ್ರ ನಡೆಸಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಮ್ಮನಕೋಲ ಗ್ರಾಮದಲ್ಲಿ ವಾಮಾಚಾರ ನಡೆಸಿದ್ದಾರೆ. ಗ್ರಾಮದ ವಾರ್ಡ್ ವಿರೋಧಿ ಬಣದ ಅಭ್ಯರ್ಥಿಗಳ ಮನೆ ಎದುರು ಲಿಂಬೆ ಹಣ್ಣು, ತೆಂಗಿನಕಾಯಿ, ಗುಲಾಲು, ದಾರ ಹೀಗೆ ಅನೇಕ ವಸ್ತುಗಳನ್ನು ಇಟ್ಟು ವಾಮಾಚಾರ ನಡೆಸಿದ್ದಾರೆ. ಇದೊಂದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಜನರು ವಾಮಾಚಾರ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 15-20 ವರ್ಷಗಳಿಂದ ರಾಜಕಾರಣ ನಡೆಸಿರುವವರು ಇಂಥ ವಾಮಾಚಾರ ಮಾಡಿಸಿದ್ದು, ಇಂಥ ರಾಜಕಾರಣದಿಂದ ಗ್ರಾಮದ ಬೆಳವಣಿಗೆ ಆಗುವುದಿಲ್ಲ. ದ್ವೇಷದ ರಾಜಕಾರಣ ಮಾಡಿ ಇವರು ಸಾಧಿಸುವುದಾದರೂ ಏನು. ಗ್ರಾಮದ ಉದ್ಧಾರ ಇವರಂಥ ಕುತಂತ್ರಿಗಳಿಂದ ಆಗಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ವಾಮಾಚರ ಬಗ್ಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗ ವಾಮಾಚಾರ ಮಾಡಿದವರ ವಿರುದ್ಧ ಗ್ರಾಮದ ಹನುಮಂತ ದೇವಸ್ಥಾನ ಎದುರು ನೂರಾರು ಜನ ಸೇರಿ ಧಿಕ್ಕಾರ ಕೂಗಿದರು. ಹನುಮಂತ ದೇವರು ಅವರಿಗೆ ಪಾಠ ಕಲಿಸಲಿ ಎಂದು ಪ್ರಾರ್ಥಿಸಿದರು.
ಮಾಟ-ಮಂತ್ರ ಮಾಡಿದ್ದನ್ನು ಗ್ರಾಮಸ್ಥರು ಸೇರಿ ಈ ಎಲ್ಲ ವಸ್ತುಗಳ ಚೀಲಗಳನ್ನು ಗ್ರಾಮದ ಶ್ರೀ ಹನುಮಂತ ದೇವರ ಗುಡಿಗೆ ಹೋಗಿ ಕಟ್ಟಿದ್ದಾರೆ.