Breaking News

3 ವರ್ಷದಗಳಿಂದ ಏಕತಾ ಅನ್ನದಾಸೋಹ ಬಡ ರೋಗಿಗಳಿಗೆ ಉಚಿತ ಅನ್ನದಾನ

Spread the love

3 ವರ್ಷದಗಳಿಂದ ಏಕತಾ ಅನ್ನದಾಸೋಹ ಬಡ ರೋಗಿಗಳಿಗೆ ಉಚಿತ ಅನ್ನದಾನ!

ಯುವ ಭಾರತ ಸುದ್ದಿ,  ಗೋಕಾಕ್: ಕಳೆದ 3 ವರ್ಷದಗಳಿಂದ ಏಕತಾ ಅನ್ನದಾಸೋಹ ಸಮಿತಿ ಬಡ ರೋಗಿಗಳಿಗೆ ಉಚಿತ ಅನ್ನದಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಮದಾಪೂರ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಸನದಿ ಹೇಳಿದರು.

ಮಂಗಳವಾರದಂದು ನಗರದ ಸರಕಾರಿ ಆಸ್ವತ್ರೆಯ ಆವರಣದಲ್ಲಿ ಇಲ್ಲಿನ ಏಕತಾ ಅನ್ನದಾಸೋಹ ಸಮಿತಿ ಅವರು ಹಮ್ಮಿಕೊಂಡ ಉಚಿತ ಅನ್ನದಾನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನ್ನದಾನ ಮಹಾದಾನ, ಬಡ ರೋಗಿಗಳಿಗೆ ಮತ್ತು ರೋಗಿಗಳ ಸಹಾಯಕರಾಗಿ ಬರುವವರು ಊಟಕ್ಕಾಗಿ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಕೆಲವರಿಗೆ ಬಡತನದಿಂದ ನಗರದಲ್ಲಿ ಹೋಟೆಲ್‍ಗಳಿಗೆ ಹೋಗಿ ಊಟ ಮಾಡಲು ತೊಂದರೆಯಾಗುತ್ತದೆ. ಇಂತಹವರಿಗೆ ಏಕತಾ ಅನ್ನದಾಸೋಹ ಸಮಿತಿಯವರು ಅನ್ನದಾನ ಸೇವೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಯುವಕರು ಮುಂದೆ ಬಂದು ಇಂತಹ ಸಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಹಮ್ಮಿಕೊಳ್ಳುವ ಮುಂಖಾತರ ಸಮಾಜವನ್ನು ಕಟ್ಟುವ ಕಾರ್ಯಮಾಡಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ವೈದ್ಯ ಡಾ. ಆರ್ ಎಸ್ ಬೆಣಚಿನ್ನಮರಡಿ, ಡಾ.ಕೋಣ , ಸಮಿತಿಯ ಮುಖಂಡ ಅಜರ ಮುಜಾವರ, ಸದ್ದಾಂ ಸೌದಾಗರ, ಗುಲಾಬ ಪುಲತಾಂಬೆ, ಶಬ್ಬೀರ ಮುಲ್ಲಾ, ಮೋಸಿನ ಬುಡ್ಡನ್ನವರ, ಮಹಮದ್ ಮತ್ತೆ, ರಿಯಾಜ ಅಂಕಲಗಿ, ರೋಶನಬೇಗ ಜಮಾದಾರ, ಮೋಸಿನ ಸೈಪಿ ಸೇರಿದಂತೆ ಇತರರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

thirteen − six =