ಗೋಕಾಕ: ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮಂಜೂರಾದ 50ನಿವೇಶನಗಳಿಗೆ ಮನೆ ಮಂಜೂರಾತಿ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಶನಿವಾರದಂದು ವಿತರಿಸಿದರು.
ಈ ಸಂದರ್ಭದಲ್ಲಿ ಮಲ್ಲಾಪುರ ಪಿಜಿ ಪಟ್ಟಣ ಪಂಚಾಯಿತಿ ಸದಸ್ಯರಾದ ಸಲೀಂ ಕಬ್ಬೂರ್, ಮಲ್ಲು ಕೋಳಿ, ಮಾರುತಿ ಹುಚ್ಚೇರಿ, ಹಿರಿಯರಾದ ಡಿ ಎಮ್ ದಳವಾಯಿ, ಮಲ್ಲಿಕಾರ್ಜುನ ತುಕಾನಟ್ಟಿ, ಸುರೇಶ್ ಪೂಜಾರಿ, ಶಿವಪುತ್ರ ಕೋಗನೂರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕೆ ಬಿ ಪಾಟೀಲ್, ಲಕ್ಷ್ಮಣ್ ಮೈತ್ರಿ, ಸುನಿಲ್ ನಾಯಕ್ ಸೇರಿದಂತೆ ಫಲಾನುಭವಿಗಳು ಇದ್ದರು.
