
ಗೋಕಾಕ: ಜಿಲೆಟಿನ್ ಸ್ಫೋಟಕ ಹೊಂದಿರುವ ಮಾಲಿಕರು ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಡಿವೈಎಸ್‌ಪಿ ಜಾವೇದ ಇನಾಮದಾರ ಸೂಚಿಸಿದರು.
ನಗರದ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಕ್ರಷರ್, ಎಮ್ ಸ್ಯಾಂಡ ಹಾಗೂ ಕಲ್ಲು ಕ್ವಾರಿ ಘಟಕಗಳ ಮಾಲಿಕರ ಸಭೆಯಲ್ಲಿ ಮಾತನಾಡಿ, ಜಿಲೆಟಿನ್ ಸ್ಫೋಟಕ ಉಪಯೋಗಿಸುವ ಮಾಲಿಕರು ಸ್ಫೋಟಕ ಬಳಸುವ ಮೊದಲು ಖಡ್ಡಾಯವಾಘಿ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು. ಯಾವುದೇ ಪ್ರಾಣಹಾನಿ ಆಗದಂತೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು, ಸರಕಾರದಿಂದ ಪಡೆದುಕೊಂಡ ಲೈಸನ್ಸ್ದಲ್ಲಿ ನೀಡಿದ ನಿಬಂಧನೆಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದರು
ಅನಧಿಕೃತವಾಗಿ ಮತ್ತು ಕಾನೂನು ಬಾಹಿರವಾಗಿ ಬ್ಲಾಸ್ಟಿಂಗ್ ಮಾಡುವದು ಕಂಡು ಬಂದಲ್ಲಿ ಅಂತಹ ಘಟಕಗಳ ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ಗೋಪಾಲ ರಾಠೋಡ, ಗ್ರಾಮೀಣ ಠಾಣೆ ಪಿಎಸ್‌ಐ ನಾಗರಾಜ ಖಿಲಾರೆ, ಎಮ್.ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಸೇರಿದಂತೆ ಪದಾಧಿಕಾರಿಗಳು ಇದ್ದರು.
YuvaBharataha Latest Kannada News