ಯುವ ಭಾರತ ಸುದ್ದಿ, ಗೋಕಾಕ್: ಇಲ್ಲಿಯ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿ.20ರಂದು ನಡೆಯಲಿದೆ.
ನಗರದ ಸಮುದಾಯ ಭವನದಲ್ಲಿ ದಿ.20೦ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಪ್ರಮುಖರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯ ಜೊತೆಗೆ ಸಮಾಜದ ಏಳ್ಗೆ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಕಾರ್ಮಿಕ ಇಲಾಖೆಯ ಜಿಲ್ಲಾಧಿಕಾರಿ ತರುನಂ ಬೆಂಗಾಲಿ, ಕಾರ್ಮಿಕ ನೀರಿಕ್ಷಕ ಪಾಂಡುರಗ ಮಾವರಕರ ಉಪನ್ಯಾಸ ನೀಡಲಿದ್ದು, ಹಡಪದ ಅಪ್ಪಣ್ಣ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.
