ಗೋಕಾಕ: ಕೊರೋನಾ ಎರಡನೇ ಅಲೆ ಅತಿವೇಗವಾಗಿರುವದರಿಂದ ರಾಜ್ಯ ಸರ್ಕಾರ ಕಠೀಣ ನಿಯಮಗಳನ್ನು ಜಾರಿಗೆ ತಂದಿದೆ ಹೀಗಾಗಿ ಎಲ್ಲರೂ ಮಾಸ್ಕಗಳನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಡಿವೈಎಸ್‌ಪಿ ಜಾವೇದ ಇನಾಮದಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು, ಬುಧವಾರದಂದು ನಗರದ ಕೋವಿಡ್ ಮಾರ್ಕೆಟ್ ರಸ್ತೆಯಲ್ಲಿ ಪೋಲಿಸ್ ಇಲಾಖೆಯಿಂದ ಮಾಸ್ಕ್ ತಪಾಸಣೆ ನಡೆಸಿ, ಮಾಸ್ಕ್ ಹಾಕದ ಪಾದಚಾರಿಗಳಿಗೆ ಹಾಗೂ ಬೈಕ್ ಸವಾರರಿಗೆ ಮಾಸ್ಕಗಳನ್ನು ನೀಡಿ, ಕೊರೋನಾ ಬಗ್ಗೆ ಜಾಗೃತಿ ಮೂಢಿಸಿ ಮಾತನಾಡಿದರು.
ನಗರದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಜನರು ಮೈಮರೆಯದಂತೆ ತಿಳಿಸಿ, ಅನಾವಶ್ಯಕವಾಗಿ ಮನೆಯಿಂದ ಹೊರಬಾರದಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಶಹರ ಠಾಣೆ ಪಿಎಸ್‌ಐ ವಾಲಿಕಾರ, ಪೋಲಿಸ್ ಪೇದೆಗಳಾದ ಕಲ್ಲಪ್ಪ ಹಕ್ಯಾಗೋಳ, ರಮೇಶ ಮುರನಾಳೆ, ಸಿದ್ನಾಳ ಸೇರಿದಂತೆ ಅನೇಕರು ಇದ್ದರು.
