ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕಿನವರಾದ ವಿಶ್ವ ದಾಖಲೆಯ ಸಾಹಿತಿ ಲಕ್ಷö್ಮಣ ಎಸ್. ಚೌರಿಯವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡುಚಿಯ ಅಜೀತ ಬಾನೆ ಕನ್ನಡ ಪ್ರಾಥಮಿಕ ಮತ್ತು ಹೊಸ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಚಿಕ್ಕೋಡಿಯ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಗೋಕಾಕನ ಕನ್ನಡ ಜಾನಪದ ಪರಿಷತ್, ಚುಟುಕು ಪರಿಷತ್, ಶ್ರೀ.ರಾಮಚಂದ್ರಪ್ಪ ಮುಕ್ಕನ್ನವರ ಪ್ರತಿಷ್ಠಾನದ ಕಾರ್ಯದರ್ಶಿಗಳಾಗಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ವೇದಿಕೆಯ ಆಜೀವ ಸದಸ್ಯರಾಗಿ, ಕುಡಚಿಯ ಅಜೀತ ಬಾನೆ ಪ್ರಾಥಮಿಕ ಹಾಗೂ ಹೊಸ ಪ್ರೌಢ ಶಾಲೆ, ಅಡಿಹುಡಿಯ ಶ್ರೀ ಸರಸ್ವತಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಸ್ಥಾಪಕರಾಗಿ, ಗೋಕಾಕ ಭಾವ ಸಂಗಮದ ಸಂಘಟನಾ ಕಾರ್ಯದರ್ಶಿಗಳು, ಬೆಳಗಾವಿಯ ಮಕ್ಕಳ ನಾಟಕ ರಚನಾ ಕಮ್ಮಟದ ಜಿಲ್ಲಾ ಸಂಚಾಲಕರು, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಜಿಲ್ಲಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರ ಚೌರೀಶನ ಕಥೆಗಳು (ಒತ್ತಕ್ಷರ ಇಲ್ಲದ ಮಕ್ಕಳ ಕಥೆಗಳು) ಎಂಬ ಕೃತಿಯು ವಿಶ್ವ ದಾಖಲೆಗೆ ಪಾತ್ರವಾಗಿದೆ. ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸಾಧನೆಗೆ ಯುನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ಎಂಪರೈರ್ ಯುನಿವರ್ಸಿಟಿವತಿಯಿಂದ ಕೊಡಮಾಡುವ ‘ಗೌರವ ಡಾಕ್ಟರೇಟ್’ ಪದವಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ಯುನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ವೈಸ್ ಚರ‍್ಮನ್ ಡಾ.ಕೆ.ಪ್ರಭಾಕರನ್, ನಿವೃತ್ತ ನ್ಯಾಯ ಮೂರ್ತಿಗಳಾದ ಡಾ.ಜೆ.ಹರಿದಾಸ್, ತಮಿಳುನಾಡಿನ ಮಾಜಿ ಶಾಸಕ ಡಾ.ಕೆ.ಎ. ಮನಮೋಹನ, ತಮಿಳುನಾಡು ರಾಣಿಪೇಟೆಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರ್.ಶಿವಕುಮಾರ, ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ದಲಿತ ಬಹುಜನ ಅಕಾಡೆಮಿಯ ಅದ್ಯಕ್ಷ ಡಾ.ಮಲ್ಯಾದ್ರಿ ಬೊಗ್ಗವರಾಪು, ವರ್ಲ್ಡ್ ಮೆಮೋರಿ ಸ್ಪೋರ್ಟ್ಸ್ ಕೌನ್ಸಿಲ್ ಫಾರ್ ಇಂಡಿಯಾದ ಜೆನರಲ್ ಸೆಕ್ರೆಟರಿ ಡಾ.ಮಾಧವಿ ಚೌಧರಿ, ಎ.ಇ.ಜಿ.ಎಂ.ಎನ್.ಸಿ.ಇ.ಓ. ಕುಮಾರನ್ ಸಂಪತ್ ಹಾಗೂ ಗಂಗಮ್ಮ ಶಕ್ತಿ ಪೀಠಂ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಫೌಂಡರ್ ಡಾ.ರವಿಚಂದ್ರನ್ ಸ್ವ್ವಾಮೀಜಿ ಉಪಸ್ಥಿತರಿದ್ದರು. ನಿವೃತ್ತ ನ್ಯಾಯ ಮೂರ್ತಿಗಳಾದ ಡಾ.ಜೆ.ಹರಿದಾಸ್ ಹಾಗೂ ಯುನಿವರ್ಸಲ್ ಡೆವಲಪ್‌ಮೆಂಟ್ ಕೌನ್ಸಿಲ್ ವೈಸ್ ಚರ‍್ಮನ್ ಡಾ.ಕೆ.ಪ್ರಭಾಕರನ್ ಚೌರಿಯವರಿಗೆ ಗೌರವ ಪದವಿಯನ್ನು ಪ್ರದಾನ ಮಾಡಿದರು. ಬೆಳಗಾವಿ ಜಿಲ್ಲೆಯ ಅನೇಕ ಸಂಘ-ಸAಸ್ಥೆಗಳು, ವಿವಿಧ ಸಮಾಜದವರು ಲಕ್ಷö್ಮಣ ಚೌರಿಯವರನ್ನು ಅಭಿನಂದಿಸಿ; ಸನ್ಮಾನಿಸಿದ್ದಾರೆ.
![](https://yuvabharatha.com/wp-content/uploads/2021/04/21-GKK-2-660x330.jpg)