Breaking News

ಟಾಸ್ಕಪೋರ್ಸ ಅಧಿಕಾರಿಗಳಿಗೆ ಕಠೀಣ ಕ್ರಮಕೈಗೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಖಡಕ್ ಸೂಚನೆ.!

Spread the love

ಟಾಸ್ಕಪೋರ್ಸ ಅಧಿಕಾರಿಗಳಿಗೆ ಕಠೀಣ ಕ್ರಮಕೈಗೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ಖಡಕ್ ಸೂಚನೆ.!

ಯುವಭಾರತ ಸುದ್ದಿ

ಗೋಕಾಕ: ಗೋಕಾಕ ತಾಲೂಕಿನಲ್ಲಿ ಸದ್ಯ ಬೇಡಗಳ ಅಭಾವವಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ. ಸಿಎಮ್ ಜೊತೆ ಚರ್ಚಿಸಿ ಅತಿ ಶೀಘ್ರದಲ್ಲಿ ಸೋಂಕಿತರಿಗೆ ಹೆಚ್ಚಿನ ಬೇಡ್‌ಗಳ ವ್ಯವಸ್ಥೆ ಮಾಡಲಾಗುವದು ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಜನರಲ್ಲಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಢಿಸುವದು ಮುಖ್ಯವಾಗಿದೆ. ಕೊರೋನಾ ಸೋಂಕಿನ ಬಗ್ಗೆ ಭಯ ಪಡದೆ ಸರಕಾರದ ನಿಯಮಗಳನ್ನು ಅನುಸರಿಸಿ, ಮನೆಯಲ್ಲೆ ಸುರಕ್ಷಿತರಾಗಿರಬೇಕು. ಅನಗತ್ಯವಾಗಿ ಜನರು ಹೊರಬರದೆ ಕೊರೋನಾ ಚೈನ್ ಬ್ರೇಕ್ ಮಾಡಲು ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿದರು.
ಸೋಮವಾರದಿಂದ ಜಾರಿಯಾಗಲಿರುವ ೧೪ ದಿನಗಳ ಕೊರೋನಾ ಕರ್ಫ್ಯೂ ಸಮಯದಲ್ಲಿ ಅನಾವಶ್ಯಕವಾಗಿ ಸುತ್ತಾಡುವವರ ಮೇಲೆ ನಿರ್ದಾಕ್ಷಿನ್ಯವಾಗಿ ಕ್ರಮ ಜರುಗಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ರಮೇಶ ಜಾರಕಿಹೊಳಿ ಅವರು ನಗರದ ಜನರು ಹಳ್ಳಿಗಳಿಗೆ ಹಳ್ಳಿಯ ಜನರು ನಗರದೆಡೆಗೆ ಆಗಮಿಸದಂತೆ ತಡೆಯಬೇಕು. ಗೋಕಾಕ ತಾಲೂಕಿನಾಧ್ಯಂತ ಲಾಕ್‌ಡೌನ್ ಕಟ್ಟು ನಿಟ್ಟಾಗಿ ಜಾರಿಯಾಗಬೇಕು ಎಂದರು.
ಕಳೆದ ೨೦೨೦ರಲ್ಲಿ ಕೈಗೊಂಡ ಕ್ರಮಗಳಂತೆ ನಗರಸಭೆ ಹಾಗೂ ಗ್ರಾಮ ಪಂಚಾಯತ ಸದಸ್ಯರುಗಳ ನೇತ್ರತ್ವದಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳ ಎಲ್ಲ ವಾರ್ಡಗಳಲ್ಲಿ ಐದು ಜನ ಕೊರೋನಾ ವಾರಿರ‍್ಸ್ಗಳನ್ನು ನೇಮಕ ಮಾಡಿ, ಅವರಿಂದ ಸಾರ್ವಜನಿಕರ ಮನೆ ಮನೆಗೆ ಔಷಧಿ, ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಪೂರೈಕೆ ಮಾಡಲು ಕೋವಿಡ್ ಟಾಸ್ಕ್ ಫೋರ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆಕ್ಸಿಜನ್ ಕೊರತೆಯನ್ನು ನಿಗಿಸಲು ಶ್ರಮಿಸುತ್ತಿದೆ. ಪ್ರೆöÊವೇಟ್ ಆಕ್ಸಿಜನ್ ಘಟಕಗಳಿಂದಲು ಆಕ್ಸಿಜನ್ ಸರಬರಾಜು ಮಾಡಲು ಸರಕಾರ ಮುಂದಾಗಿದೆ. ಕೊರೋನಾ ಸೋಂಕಿತರಿಗೆ ಯಾವುದೇ ತೊಂದರೆಗಳಾಗದAತೆ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕು. ಜೊತೆಗೆ ಪ್ರತಿನಿತ್ಯ ಕ್ಷೇತ್ರದ ಸೋಂಕಿತರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
“ಸಿಎಮ್ ಬಿಎಸ್‌ವೈ ಸೋಮವಾರದಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‌ಡೌನ್ ಘೋಷಣೆ ಮಾಡಿದ ಹಿನ್ನಲೆ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಟಾಸ್ಕಪೋರ್ಸ ಅಧಿಕಾರಿಗಳ ಜೊತೆಗೆ ಕೋವಿಡ್‌ನಿಂದ ಗುಣಮುಖರಾದ ಮೇಲೆ ಮೊದಲ ಬಾರಿಗೆ ಸಭೆ ನಡೆಸಿ, ಟಾಸ್ಕಪೋರ್ಸ ಅಧಿಕಾರಿಗಳಿಗೆ ಕಠೀಣ ಕ್ರಮಕೈಗೊಳ್ಳುವಂತೆ ಪಾಠ ಮಾಡಿದರು.”
ಟಾಸ್ಕಪೋರ್ಸ ಸಭೆಯಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‌ಪಿ ಜಾವೇದ ಇನಾಮದಾರ, ಸಿಪಿಐ ಗೋಪಾಲ ರಾಠೋಡ, ಪೌರಾಯುಕ್ತ ಶಿವಾನಂದ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 × 5 =