ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನಕ್ಕೆ ಚಾಲನೆ.!
ಯುವ ಭಾರತ ಸುದ್ದಿ, ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಾಗೂ ಕೇಂದ್ರದ ನರೇಂದ್ರ ಮೋದಿ ಸರಕಾರ ಏಳು ವರ್ಷ ಪೂರೈಸಿದ ಹಿನ್ನಲೆ ಸೇವಾ ಹಿ ಸಂಘಟನ ನಿಮಿತ್ಯವಾಗಿ ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನವನ್ನು ನಗರದ ಸಮುದಾಯ ಭವನದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಹಾಗೂ ಶಾಸಕರ ಸಹಾಯಕ ಸುರೇಶ ಸನದಿ ಚಾಲನೆ ನೀಡಿದರು.
ಬಿ ಎಸ್ ಯಡಿಯೂರಪ್ಪನವರ ನೇತ್ರತ್ವದ ರಾಜ್ಯ ಸರಕಾರ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಬಡ ಕೂಲಿಕಾರ್ಮಿಕರಿಗಾಗಿ ಸಿಎಂ ಬಿಎಸ್‌ವೈರವರು 1250 ಕೋಟಿ ರೂ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕ್ಷೇತ್ರದ ಜನರಿಗಾಗಿ ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಕೋವಿಡ್ ವಿಶೇಷ ಸಹಾಯಧನ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ ಹಾಗೂ ಕಲಾವಿದರಿಗೆ ತಮ್ಮ ವೈಯಕ್ತಿಕವಾಗಿ ಫಲಾನುಭವಿಗಳಿಗೆ ಉಚಿತ ಆನ್‌ಲೈನ್ ಅರ್ಜಿ ಸೇವಾ ಅಭಿಯಾನ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯ ವರೆಗೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಸವರಾಜ ಆರೇನ್ನವರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಏಕ್ಕೇರಿಮಠ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಲೀಕಜಾನ ತಳವಾರ, ವಿಶಾಲ ಪಟಗುಂದಿ, ಪುನೀತ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಗೀತಾ ಗೌಡರ, ಕಾರ್ಯದರ್ಶಿ ರಾಜೇಶ್ವರಿ ಮಾಳ್ವೊದೆ ಸೇರಿದಂತೆ ಅನೇಕರು ಇದ್ದರು.