ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ನಗರದ ಮುಸ್ಲಿಂ ಮಹದ್ವಿಯಾ ಜಮಾತ ಸ್ಮಶಾನಕ್ಕೆ ಹೆಚ್ಚುವರಿ ೨೫ ಲಕ್ಷಗಳನ್ನು ಬಿಡುಗಡೆ ಮಾಡಿ ನಗರಸಭೆಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಗುರುವಾರದಂದು ನಗರದ ಮುಸ್ಲಿಂ ಮಹದ್ವಿಯಾ ಸ್ಮಶಾನದಲ್ಲಿ ನಗರಸಭೆಯಿಂದ ಮಂಜೂರಾದ ಸನ್ ೨೦೧೯- ೨೦ ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನ ಹಾಗೂ ೧೪ನೇ ಹಣಕಾಸು ಯೋಜನೆಯಲ್ಲಿ ವಿದ್ಯುತ್ ದೀಪ ಮತ್ತು ಕಾಂಕ್ರೀಟ್ ರಸ್ತೆ , ಪೇರ್ವಸ್ ಕಾಮಗಾರಿಗೆ ಮಂಜೂರಾದ ಒಟ್ಟು ೨೨.೮೧ ಲಕ್ಷ ರೂಗಳ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕರ ಅಭಿವೃದ್ಧಿ ಪರ ಚಿಂತನೆಯಿAದ ನಗರಸಭೆ ವತಿಯಿಂದ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದು, ನಗರವನ್ನು ಸುಂದರ ಗೋಳಿಸಲು ನರಗಸಭೆ ಕಂಕಣಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಮುಸ್ಲಿಂ ಸಮಾಜದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಅರೆನ್ನವರ, ಸ್ಥಾಯಿ ಸಮಿತಿ ಚೇರಮನ್ ಕೆ.ಎಂ.ಗೋಕಾಕ, ನಗರಸಭೆ ಸದಸ್ಯರಾದ ಬಾಬು ಮುಳಗುಂದ, ಪ್ರಕಾಶ ಮುರಾರಿ, ಹರೀಶ ಬೂದಿಹಾಳ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೋಲ್ಲರ, ಅಬ್ದುಲಸತ್ತಾರ ಶಾಬಾಶಖಾನ, ವಿಜಯ ಜತ್ತಿ, ಶ್ರೀಶೈಲ ಪೂಜಾರಿ, ಮಹದ್ವಿಯಾ ಸಮಾಜದ ಮುಖಂಡರಾದ ಮಹ್ಮದಶರೀಪ ಪಾಜನಿಗರ, ಎಸ್.ಎಚ್.ನರೋ, ರಾಜು ಅಂಡಗಿ, ಮಹ್ಮದಶಪೀ ಮತ್ತೆ, ಮೀರಾಸಾಬ ಪಾಜನಿಗರ, ಖಾಜಾ ಮತ್ತೆ, ಸಿಕಂದರ ಪಾಜನಿಗರ, ಕಾಶಿಮ ಪಾಜನಿಗರ, ಸೇರಿದಂತೆ ಅನೇಕರು ಇದ್ದರು.
