ಗೋಕಾಕ: ತಾಲೂಕಿನ ಸುಲಧಾಳ ಗ್ರಾಮದಲ್ಲಿ ಶಾಸಕÀ ರಮೇಶ ಜಾರಕಿಹೊಳಿ ಅವರ ಆದೇಶದಂತೆ ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೊಲೀಸಗೌಡರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸುಲಧಾಳ ಗ್ರಾಮದ ನೂತನ ಬಸ ನಿಲ್ದಾಣ ಕಟ್ಟಡ ಕಾಮಗಾರಿ ಹಾಗೂ ಶ್ರೀ ಕುಮಾರರಾಮ ದೇವಸ್ಥಾನ ಕಟ್ಟಡ ಕಾಮಗಾರಿ ಭೂಮಿ ಪೂಜೆ, ನೂತನ ಸರಕಾರಿ ಆರೋಗ್ಯ ಉಪ ಕೇಂದ್ರ ಉದ್ಘಾಟನೆ ಹಾಗೂ ಉಜ್ವಲ ಅನಿಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ ಒಲೆ, ಸಿಲೆಂಡರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಳಗೌಡ ಪಾಟೀಲ, ಬಸವಂತಪ್ಪ ಬಾಗೇವಾಡಿ, ಮಾರುತಿ ಗೋಡಲಕುಂದರಗಿ, ನಟರಾಜ ಸತ್ತೆನ್ನವರ, ಅಡಿವೆಪ್ಪ ಕೆಂಪಣ್ಣವರ, ಅರುಣ ಹಿರೇಮಠ, ಕಲ್ಲಪ್ಪ ವಠಾರಿ, ಬಸವಣ್ಣೆಪ್ಪ ಬೂದನವರ, ಸುಲಧಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತರರು ಉಪಸ್ಥಿತರಿದ್ದರು.
