Breaking News

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಹವಾ!!

Spread the love

ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಹವಾ!!

ಎಲ್ಲಿ ನೋಡಿದರಲ್ಲಿ ಲಖನ್ ಸಾಹುಕಾರ ಜಯಘೋಷ!

ಗೆಲುಬಿನ ಹುಮ್ಮಸ್ಸಿನಲ್ಲಿರುವ ಲಖನ್ ಸಾಹುಕಾರ!

ಬೆಳಗಾವಿ: ಎಲ್ಲಿ ನೋಡಿದರಲ್ಲಿ ಬೆಳಗಾವಿ ತುಂಬೆಲ್ಲ ಲಖನ್ ಜಾರಕಿಹೊಳಿ ಹವಾ… ಎಲ್ಲರ ಬಾಯಲ್ಲೂ ಲಖನ್‌ ಜಾರಕಿಹೊಳಿ ಜಯವಾಗಲಿ ಎಂಬ ಜಯಘೋಷ… 10 ಸಾವಿರಕ್ಕೂ ಹೆಚ್ಚು ಬೆಂಬಲಿಗರಿಂದ ಮೆರವಣಿಗೆ…

ಮಂಗಳವಾರ ಶುಭ ಮುಹೂರ್ತದಲ್ಲಿ ತಮ್ಮ 10 ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ನಗರದ ಸರ್ದಾರ್ ಮೈದಾನದಿಂದ ಲಖನ್ ಜಾರಕಿಹೊಳಿ ಅವರು ಅಬ್ಬರದ ಮೆರವಣಿಗೆ ಆರಂಭಿಸಿದರು. ಜಾರಕಿಹೊಳಿ ಬೆಂಬಲಿಗರು ಇಡೀ ಬೆಳಗಾವಿಯನ್ನು ಆವರಿಸಿಕೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರ ಬೆಂಬಲದೊಂದಿಗೆ ಆಗಮಿಸಿದ್ದ ಲಖನ್ ಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಕೆಎಂಎಫ್ ನಿರ್ದೇಶಕ, ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ಸಾಥ್ ನೀಡಿದರು.

ಒಂದು ಅಂದಾಜಿನ ಪ್ರಕಾರ 3500ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಲಖನ್ ಜಾರಕಿಹೊಳಿಗೆ ಬೆಂಬಲ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗೆಲುವಿನ ಹುಮ್ಮಸ್ಸಿನಲ್ಲಿರುವ ಲಖನ್ ಜಾರಕಿಹೊಳಿ ಅವರು, ಅಭಿವೃದ್ಧಿ ಒಂದೇ ನಮ್ಮ ಗುರಿ ಎಂದು ಹೇಳುವ ಮೂಲಕ ಜನರನ್ನು ಹುರಿದುಂಬಿಸಿದರು.


Spread the love

About Yuva Bharatha

Check Also

11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ!

Spread the love11ಕೆ.ವ್ಹಿ ಭೂಗತ ವಿದ್ಯುತ್ ವಿತರಣಾ ಮಾರ್ಗ ಕಾಮಗಾರಿಗೆ ಚಾಲನೆ-ಶಾಸಕ ರಮೇಶ ಜಾರಕಿಹೊಳಿ! ಗೋಕಾಕ: ನಗರದ ಡಾರ‍್ಸ್ ಕಾಲನಿ …

Leave a Reply

Your email address will not be published. Required fields are marked *

17 − 17 =